ಸೋಮವಾರಪೇಟೆ,ಅ.22: ವಲಯ ಡಿವೈಎಸ್ಪಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಸಂಪತ್ ಕುಮಾರ್ ಅವರು ಪಟ್ಟಣ ಠಾಣೆಗೆ ಆಗಮಿಸಿ, ಸಿಬ್ಬಂದಿಗಳ ಕುಂದು ಕೊರತೆ ವಿಚಾರಿಸಿದರು.
ಕಳೆದ 20 ವರ್ಷಗಳ ಹಿಂದೆ ಇದೇ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕರು ಠಾಣೆಗೆ ಭೇಟಿ ನೀಡಿ ನೂತನ ಅಧಿಕಾರಿಗೆ ಶುಭ ಕೋರಿದರು.
ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಯೂನಿಯನ್, ಮೋಟಾರ್ ಯೂನಿಯನ್, ಬಸ್ ಯೂನಿಯನ್ ಪದಾಧಿಕಾರಿಗಳು ಹಾಗೂ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಠಾಣಾಧಿಕಾರಿ ಶಿವಣ್ಣ ಮತ್ತಿತರರು ಅಧಿಕಾರಿಗೆ ಶುಭ ಕೋರಿದರು.
ಇಲ್ಲಿನ ಜನರು ವಿಶ್ವಾಸಕ್ಕೆ ಆರ್ಹರು, ಕಾನೂನಿಗೆ ಗೌರವ ನೀಡುತ್ತಾರೆ ಎಂಬದು ಕಳೆದ 20 ವರ್ಷಗಳ ಹಿಂದೆಯೇ ತಿಳಿದಿದ್ದೇನೆ. ಸಾರ್ವಜನಿಕರಿಗೆ ರಕ್ಷಣೆ ಕೊಡುವದು ನಮ್ಮ ಕರ್ತವ್ಯ. ಸಮಾಜಘಾತುಕ ಶಕ್ತಿಗಳನ್ನು ಬಗ್ಗು ಬಡಿಯಲು ಸಾರ್ವಜನಿಕ ಸಹಕಾರ ಅಗತ್ಯ ಎಂದು ಡಿವೈಎಸ್ಪಿ ಸಂಪತ್ ಕುಮಾರ್ ಹೇಳಿದರು.