ಮಡಿಕೇರಿ, ಡಿ.20: ಪ್ರಸಕ್ತ ವರ್ಷ ಮಳೆ ಕಡಿಮೆಯಿರುವದರಿಂದ ಮುಂದಿನ ಬೇಸಿಗೆಯಲ್ಲಿ ಮಡಿಕೇರಿ ನಗರದ ಜನತೆಗೆ ನಿರಂತರ ನೀರು ಸರಬರಾಜು ಮಾಡಬೇಕಾದ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಸಭೆ ಈಗಲೇ ಜಾಗೃತಗೊಂಡಂತಿದೆ.ಕುಂಡಾ ಮೇಸ್ತ್ರಿ ಹೊಳೆಯಿಂದ ನೀರಿನ ಟ್ಯಾಂಕ್ ಮೂಲಕ ನಿರಂತರವಾಗಿ ಕೂಟುಹೊಳೆಗೆ ನೀರು ಸರಬರಾಜುಗೊಳಿಸಲು ನಗರ ನೀರು ಸರಬರಾಜು ಮಂಡಳಿ ರೂ. 5 ಲಕ್ಷ ವೆಚ್ಚದಲ್ಲಿ ಟ್ಯಾಂಕ್ ಅಳವಡಿಕೆ ಕಾರ್ಯ ನಡೆಸುತ್ತಿದೆ. ಈ ಕಾಮಗಾರಿಯ ವೀಕ್ಷಣೆಗೆ ಇಂದು ನಗರ ಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೌರಾಯುಕ್ತೆ ಶುಭಾ, ಸದಸ್ಯರುಗಳಾದ ಪ್ರಕಾಶ್ ಆಚಾರ್ಯ ಹಾಗೂ ಮನ್ಸೂರ್ ಇವರುಗಳು ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭ “ಶಕ್ತಿ” ಯೊಂದಿಗೆ ಮಾತನಾಡಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಮುಂದಿನ ದಿನಗಳಲ್ಲಿ ನಾಗರಿಕರಿಗೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ನಗರಸಭೆ ಈಗಾಗಲೇ ಕಾರ್ಯೋನ್ಮುಖವಾಗುತ್ತಿದೆ ಎಂದರು

ಮಾರುಕಟ್ಟೆ ಕಾಮಗಾರಿ

ಮಡಿಕೇರಿ ನಗರದ ನೂತನ ಮಾರುಕಟ್ಟೆ ನಿರ್ಮಾಣ ಕೆಲಸ ತ್ವರಿತದಿಂದ ಸಾಗುತ್ತಿದೆ. ಬಹುಪಾಲು ಮುಂದಿನ ಜನವರಿ 26 ರಂದು ಉದ್ಘಾಟನೆ ನಡೆಸಲು ಸಜ್ಜಾಗುತ್ತಿದೆ ಎಂದರು.

(ಮೊದಲ ಪುಟದಿಂದ)

ಬೀದಿ ಬದಿ ವ್ಯಾಪಾರಿಗಳಿಗೆ ಕೊಕ್

ನಗರದಲ್ಲಿ ಬೀದಿ ಬದಿ ವ್ಯಾಪಾರಿ ಗಳನ್ನು ತೆÀರವುಗೊಳಿಸುವದಾಗಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಪೌರಾಯುಕ್ತೆ ಶುಭಾ ತಿಳಿಸಿದರು. ಇವರಿಗೆ ಬದಲೀ ವ್ಯವಸ್ಥೆ ಅಸಾಧ್ಯವಾಗಿದೆ. ಏಕೆಂದರೆ ಇರುವ ಸ್ಥಳದಲ್ಲಿಯೇ ವಾಹನ ನಿಲುಗಡೆÀಗೇ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಈಗಾಗಲೇ ರಾಜಾಸೀಟು ವಿಭಾಗದಲ್ಲಿ ಪರವಾನಗಿ ಹೊಂದಿರುವ 6 ಅಂಗಡಿ ಮಳಿಗೆಗಳ ಹೊರತು ಉಳಿದ ಮಳಿಗೆಗಳ ತೆರವು ಕಾರ್ಯಾಚರಣೆ ಪ್ರಾರಂಭಗೊಂಡಿದೆ ಎಂದು ಮಾಹಿತಿಯಿತ್ತರು. ರಾಜಾಸೀಟಿನಲ್ಲಿ ಅನಧಿಕೃತ ಮಳಿಗೆಗಳ ಬಗ್ಗೆ ನಗರದ ಪ್ರಮುಖರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಪರಿಸರ ರಕ್ಷಣೆ ಮತ್ತ್ತು ವಾಯು ವಿಹಾರಕ್ಕೆ ತೆರಳುವ ಮಂದಿಗೆ ಉತ್ತಮ ವಾತಾವರಣಕ್ಕಾಗಿ ಈ ಕ್ರಮ ಕೈಗೊಳ್ಳ್ಳಲಾಗಿದೆ ಎಂದು ತಿಳಿಸಿದರು.

- ವರದಿ: ಟಿ.ಜಿ.ಸತೀಶ್