ಗೋಣಿಕೊಪ್ಪಲು, ಜ. 19: ಇತ್ತೀಚೆಗೆ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ಫ್ಲೋರ್‍ಬಾಲ್ ಇಲ್ಲಿನ ಪಂದ್ಯಾವಳಿಯಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಉತ್ತಯ್ಯ ಎಂ.ಪಿ., ಸೋಮಣ್ಣ ಪಿ.ಯು., ದರ್ಶನ್ ಎಂ.ಡಿ., ಹೇಮಂತ್, ನಿಕಿಲ್ ಬಿ.ಡಿ., ಜತನ್ ಎ.ಎ. ಪಾಲ್ಗೊಂಡಿದ್ದರು. ವಿದ್ಯಾರ್ಥಿನೀಯರ ವಿಭಾಗದಲ್ಲಿ ಕರ್ನಾಟಕದ ತಂಡವನ್ನು ಲಾವಣ್ಯ, ಹೃತ್ವಿಕ, ಅಭಿತಾ ಹಾಗೂ ಐಶ್ವರ್ಯ ಪ್ರತಿನಿಧಿಸಿ ರಾಷ್ಟ್ರೀಯ ಫ್ಲೋರ್‍ಬಾಲ್ ಪಂದ್ಯಾಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ದೈಹಿಕ ಶಿಕ್ಷಕÀ ಸಂತೋಷ್ ಎಂ.ಟಿ. ಹಾಗೂ ಸುಬ್ಬಯ್ಯ ಅವರುಗಳು ತರಬೇತಿ ನೀಡಿದ್ದರು.