*ಗೋಣಿಕೊಪ್ಪಲು, ಜ. 15: ಕಾವೇರಿ ಕಾಲೇಜಿನಲ್ಲಿ ಆಯೋಜಿ ಸಿದ್ದ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಭಾಗಿಯಾದರು.
ಕಾವೇರಿ ಕಾಲೇಜಿನ ರೆಡ್‍ಕ್ರಾಸ್, ಹೆಲ್ತ್ ಕ್ಲಬ್ ಘಟಕ, ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಅಗರ್‍ವಾಲ್ಸ್-ಐ ಕ್ಲಿನಿಕ್ ಮೈಸೂರು ಇವರ ಸಹಯೋಗದೊಂದಿಗೆ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರವನ್ನು ಏರ್ಪಡಿಸ ಲಾಗಿತ್ತು. ಪ್ರಾಂಶುಪಾಲ ಪ್ರೊ. ಪಟ್ಟಡ ಎ. ಪೂವಣ್ಣ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಇಂತಹ ಶಿಬಿರಗಳನ್ನು ನಡೆಸುವದರಿಂದ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಲು ಸಹಕಾರಿಯಾಗುತ್ತದೆ. ಇಂತಹ ಶಿಬಿರಗಳು ನಡೆದಾಗ ಅದರ ಸದುಪಯೋಗವನ್ನು ಪಡೆದುಕೊಳ್ಳು ವಂತೆ ತಿಳಿಸಿದರು. ರೆಡ್ ಕ್ರಾಸ್ ಸಂಚಾಲಕ ಎಂ.ಎ. ಕುಶಾಲಪ್ಪ, ಹೆಲ್ತ್ ಕ್ಲಬ್ ಸಂಚಾಲಕಿ ಸಿ.ಎಲ್. ನಿಶಾ, ಉಪನ್ಯಾಸಕರಾದ ಸಚಿನ್ ಜಾರ್ಜ್, ಯು. ಟಿ. ಪೆಮ್ಮಯ್ಯ, ಕೃತಿಕ, ಕೃತಿ, ಕವಿತ ಕಾರ್ಯಕ್ರಮ ಆಯೋಜಿಸಿದ್ದರು.