ಕುಶಾಲನಗರ, ನ. 2: ಕರ್ನಾಟಕ ಕಾವಲುಪಡೆಯ 6ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ತಾ. 9 ರಂದು ನಡೆಯಲಿದೆ. ಅಂದು ಬೆಳಿಗ್ಗೆ ಕನ್ನಡ ಜನಜಾಗೃತಿ ಅಂಗವಾಗಿ ಭವ್ಯ ಮಂಟಪದ ಮೆರವಣಿಗೆ ಕುಶಾಲನಗರದಿಂದ ಪ್ರಾರಂಭಗೊಂಡು ಕುಶಾಲನಗರ ಕಾವೇರಿ ಪ್ರತಿಮೆ ಬಳಿ ಗಿಡ ನೆಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾವಲುಪಡೆಯ ರಾಜ್ಯಾಧ್ಯಕ್ಷರಾದ ಮೋಹನ್ಕುಮಾರ್ ಗೌಡ ವಹಿಸಲಿದ್ದು ಕೊಡ್ಲಿಪೇಟೆಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಎಂ.ಕೃಷ್ಣ ತಿಳಿಸಿದ್ದಾರೆ.