ಗೋಣಿಕೊಪ್ಪಲು, ಆ. 30: ವೀರಾಜಪೇಟೆ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದಿಂದ ಇಲ್ಲಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನ ನಡೆಯುವ ಜಿಲ್ಲಾ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾವಳಿ ಯನ್ನು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಉದ್ಘಾಟಿಸಿದರು.
ಈ ಸಂದರ್ಭ ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಕ್ರೀಡಾಕೂಟಗಳಿಂದ ಬರುವ ಆರ್ಥಿಕ ಕ್ರೋಡಿಕರಣವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿರುವದು ಒಳಿತು ಎಂದರು.
ತಾಲೂಕು ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಡಾಡು ಜೋಸೆಫ್, ಪೊಲೀಸ್ ಉಪ ನಿರೀಕ್ಷಕ ಗೋವಿಂದರಾಜ್, ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಮೂಕಳೇರ ಲಕ್ಷ್ಮಣ, ಮಡಿಕೇರಿ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಲೂಯಿಸ್ ಉಪಸ್ಥಿತರಿದ್ದರು. ರಾಮದಾಸ್ ನಿರೂಪಿಸಿದರು. ಸುನಿಲ್ ಸ್ವಾಗತಿಸಿದರು. ರಾಜಾ ವಂದಿಸಿದರು.
ಫಲಿತಾಂಶ: ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಗೋಣಿಕೊಪ್ಪ ಹೈಸ್ಕೂಲ್ ಬಾಯ್ಸ್ ತಂಡವು ಟೈಬ್ರೇಕರ್‍ನಲ್ಲಿ ಎಂ ಪಿ ಬಾಯ್ಸ್ ತಂಡವನ್ನು 4-3 ಗೋಲುಗಳಿಂದ ಸೋಲಿಸಿತು.
ಯುಎಸ್‍ಸಿ ವೀವಿರಾಜಪೇಟೆ ತಂಡವು 3-1 ಗೋಲುಗಳಿಂದ ಬಾಳೆಲೆ ವಿರುದ್ಧ ಜಯ ಸಾಧಿಸಿತು. ಕಟ್ಟೆಮಾಡು ವೈಷ್ಣವಿ ತಂಡ ತಿತಿಮತಿ ಮ್ಯಾಚ್‍ಸ್ಟಾರ್ ತಂಡವನ್ನು 2-0 ಗೋಲುಗಳಿಂದ ಮಣಿಸಿತು.