ವೀರಾಜಪೇಟೆ, ಜು. 28: ವೀರಾಜಪೇಟೆ ಬಳಿಯ ಕುಕ್ಲೂರು ಗ್ರಾಮದ ಹೆಚ್.ಜಿ. ಮಾಣು (75) ಎಂಬವರು ಕೆರೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ದುರ್ಮರಣಗೊಂಡಿರುವದಾಗಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತರು ಕುಕ್ಲೂರು ಗ್ರಾಮದ ಪೈಸಾರಿ ನಿವಾಸಿಯಾಗಿದ್ದು, ಬೆಳಿಗ್ಗೆ ಎಂದಿನಂತೆ ಕೂಲಿ ಕೆಲಸಕ್ಕೆ ಕಾರ್ಯಪ್ಪ ಎಂಬವರ ಕೆರೆಯನ್ನು ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೃತ ಮಾಣುವಿಗೆ ಪತ್ನಿ, ಎರಡು ಮಕ್ಕಳು ಇದ್ದಾರೆ. ಮಾಣುವಿನ ಪತ್ನಿ ಗೌರಮ್ಮ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.