ಮಡಿಕೇರಿ, ಆ.12 :ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಡಾ. ಎಸ್.ಎಸ್. ಪ್ರಕಾಶಂ ಅವರು ಕೊಡಗು ಜಿಲ್ಲಾ ಕಾಂಗ್ರೆಸ್ನ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕಾರ್ಮಿಕ ಪರವಾದ ಹೋರಾಟಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಪಕ್ಷವನ್ನು ಸಂಘಟಿಸುವದಾಗಿ ವಿ.ಪಿ.ಶಶಿಧರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಮಿಕ ಘಟಕವನ್ನು ತಾವು ಬಯಸಿ ಪಡೆದಿರುವದಾಗಿ ಸ್ಪಷ್ಟಪಡಿಸಿದರು. ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಿ ಪಕ್ಷಕ್ಕೆ ಹೊಸ ಮೆರುಗನ್ನು ನೀಡಲಾಗುವದು. ಜಿಲ್ಲೆಯಲ್ಲಿ ಕಾಂಗ್ರೆಸ್ನ ಹೋರಾಟದ ಪರ್ವವನ್ನು ಕಾರ್ಮಿಕ ಘಟಕ ದಿಂದಲೇ ಆರಂಭಿಸಲಾಗುವದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೆ.2 ರಂದು ದೇಶ ವ್ಯಾಪಿ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಇದಕ್ಕೆ ಪಕ್ಷದ ಬೆಂಬಲವಿದೆ. ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯನ್ನು ಮತ್ತು ಕಾರ್ಮಿಕ ವರ್ಗವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವದೆಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿರುವ ಎಲ್ಲಾ ವಲಸೆ ಕಾರ್ಮಿಕರನ್ನು ಬಾಂಗ್ಲಾ ದೇಶಿಗರೆಂದು ಪ್ರತಿಬಿಂಬಿಸುವದು ಸರಿಯಲ್ಲ. ಅಸ್ಸಾಂ ರಾಜ್ಯದ ಅಥವಾ ಬೆÉೀರೆ ಯಾವದೇ ರಾಜ್ಯದ ಕಾರ್ಮಿಕರಿಗೆ ದೇಶದ ಯಾವದೇ ಭಾಗದಲ್ಲಿ ದುಡಿಯುವ ಹಕ್ಕಿದೆ. ಕೊಡಗಿನ ತೋಟದ ಮಾಲೀಕರು ವಲಸೆ ಕಾರ್ಮಿಕರನ್ನು ಬಯಸಿ ಹೊರಗಿನಿಂದ ಕರೆ ತಂದಿದ್ದಾರೆ. ಈ ವಲಸೆ ಕಾರ್ಮಿಕರಿಂದ ಕೊಡಗಿನ ಸಂಸ್ಕøತಿಗೆ ಧಕ್ಕೆಯಾದಲ್ಲಿ ಪ್ರಶ್ನಿಸಲಾಗುವದೆಂದು ವಿ.ಪಿ.ಶಶಿಧರ್ ಸ್ಪಷ್ಟಪಡಿಸಿದರು.
ಕಾಡಾನೆ ಧಾಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಮೃತ ಪಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಅರಣ್ಯ ಸಚಿವರನ್ನು ಭೇಟಿಯಾಗಿ ಕಾಡಾನೆ ಉಪಟಳದ ಶಾಶ್ವತ ನಿಯಂತ್ರಣಕ್ಕೆ ಮನವಿ ಮಾಡಲಾಗುವದೆಂದರು.
ರಂಜನ್ ವಿರುದ್ಧ ಟೀಕೆ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಹಾರಂಗಿ ಹಿನ್ನೀರಿನಿಂದ ಮುಳುಗಡೆ ಯಾದ ಪ್ರದೇಶಗಳ ವಸತಿ ರಹಿತರಿಗೆ ರಾಜ್ಯ ಕಾಂಗ್ರೆಸ್ ಸರಕಾರ ಪುನರ್ವಸತಿ ಕಲ್ಪಿಸಿದೆ ಎಂದರು. ಕಳೆದ ನಾಲ್ಕು ದಶಕಗಳಿಂದ ತಮ್ಮ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸ ದಿರುವದರಿಂದ ಯಡವನಾಡು ಮತ್ತು ಅತ್ತೂರು ಗ್ರಾಮಗಳ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಸತತ ಹದಿನೆಂಟು ವರ್ಷಗಳ ಕಾಲ ಈ ಕ್ಷೇತ್ರದ ಶಾಸಕರಾಗಿರುವ ಅಪ್ಪಚ್ಚು ರಂಜನ್ ಅವರಿಗೆÀ ಸಮಸ್ಯೆಯನ್ನು ಬಗೆ ಹರಿಸÀಲು ಸಾಧ್ಯವಾಗಿರಲಿಲ್ಲ. ಆದರೆ, ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರೊಂದಿಗ ಚರ್ಚಿಸಿ ಈ ಎರಡು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಸಮಸ್ಯೆ ಯನ್ನು ಬಗೆಹರಿಸಿದ್ದಾರೆ ಎಂದರು.
ವಿ.ಪಿ.ಶಶಿಧರ್ ಮಾತನಾಡಿ ಸುದೀರ್ಘಾವಧಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರಿಗೆ ಅವರದೇ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಂದರ್ಭ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗಿಲ್ಲ. ಹಾರಂಗಿ ಯಲ್ಲಿ ಕೋಟ್ಯಾಂತರ ವೆಚ್ಚದ ಬೃಂದಾವನ ನಿರ್ಮಾಣ ಕಾರ್ಯ ಕಳಪೆ ಗುಣಮಟ್ಟದಿಂದ ನಡೆದ ಕಾರಣ ಅಣೆÉಕಟ್ಟು ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ತಮ್ಮ ಹುಳುಕುಗಳನ್ನು ಬಿಜೆಪಿ ಮಂದಿ ಮುಚ್ಚಿಕೊಂಡಿದ್ದರು. ಇದೀಗ ಕಾಂಗ್ರೆಸ್ ಅವಧಿಯಲ್ಲಿ ಹಾರಂಗಿ ವೀಕ್ಷಣೆÉಗೆ ಸಾರ್ವಜನಿಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಸಿ. ಪೂಣಚ್ಚ, ಕೊಡಗರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಬ್ಬಾಸ್, ನೆಲ್ಯಹುದಿಕೇರಿ ಪ್ರಮುಖ ಸಜಿ, ಸೋಮವಾರಪೇಟೆ ಕಾರ್ಮಿಕ ಘಟಕದ ಅಧ್ಯಕ್ಷ ನಾಗರಾಜ್, ಹಾಗೂ ಪ್ರಮುಖರಾದ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.