ನಾಪೆÇೀಕ್ಲು, ಅ. 3: ಕೊಡಗು ಜಿಲ್ಲೆಗೆ ಕಾಫಿ ಬೆಳೆ ಆಧಾರ ಸ್ಥಂಭವಾಗಿದೆ. ಇದನ್ನು ನಂಬಿ ಲಕ್ಷಾಂತರ ಕಾರ್ಮಿಕರು, ಬೆಳೆಗಾರರು ಹಾಗೂ ವ್ಯಾಪಾರಸ್ಥರಿದ್ದಾರೆ. ಕೇಂದ್ರ ಸರಕಾರದ ಕಾಫಿ ಕಾಯ್ದೆ ಜಾರಿಯಾದರೆ ಲಕ್ಷಾಂತರ ಜನರ ಬದುಕು ಅತಂತ್ರವಾಗುವದರಲ್ಲಿ ಯಾವದೇ ಸಂದೇಹವಿಲ್ಲ ಎಂದು ಕಾಫಿ ಬೆಳೆಗಾರರ ಒಕ್ಕೂಟದ ನಾಪೆÇೀಕ್ಲು ಕೇಂದ್ರ ಸಮಿತಿ ಸದಸ್ಯ ಬಿದ್ದಾಟಂಡ ದಿನೇಶ್ ಆತಂಕ ವ್ಯಕ್ತಪಡಿಸಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಫಿ ಕಾಯ್ದೆ ಹೆಸರಿನಲ್ಲಿ ಕೇಂದ್ರ ಸರಕಾರ ಕಾಫಿ ಬೆಳೆಗಾರರನ್ನು ನಿರ್ಗತಿಕರನ್ನಾಗಿಸಲು ವ್ಯವಸ್ಥಿತ ಸಂಚು ರೂಪಿಸುತ್ತಿದೆ. ಕಾಯ್ದೆಯ ಬಗ್ಗೆ ಬೆಳೆಗಾರರ ಅಭಿಪ್ರಾಯ, ಆಕ್ಷೇಪ ಸಲ್ಲಿಸಲು ನಿಗಧಿಪಡಿಸಿದ ದಿನಾಂಕವನ್ನು ಅಂತರ್ಜಾಲದಲ್ಲಿ ಮಾತ್ರ ಪ್ರಕಟಿಸಿ, ಮಾಧ್ಯಗಳಲ್ಲಿ ಮಾಹಿತಿ ನೀಡದೆ ಗ್ರಾಮೀಣ ಪ್ರದೇಶದ ಕಾಫಿ ಬೆಳೆಗಾರರನ್ನು ಬಲಿಪಶುಗಳನ್ನಾಗಿಸಿರುವದೇ ಇದಕ್ಕೆ ಒಂದು ಉದಾಹರಣೆಯಾಗಿದೆ. ಕಾಫಿ ಮಂಡಳಿಯ 20 ಸದಸ್ಯರ ಪೈಕಿ 15 ಜನ ಸದಸ್ಯರು ವಿವಿಧ ಮಂತ್ರಿಗಳು, ಅಧಿಕಾರಿಗಳಾಗಿರುತ್ತಾರೆ. ಕಾಫಿಯ ಬಗ್ಗೆ ಯಾವದೇ ಪರಿಜ್ಞಾನವಿಲ್ಲದ ಇವರಿಂದ ಕಾಫಿ ಬೆಳೆಗಾರನ ಹಿತ ಕಾಯಲು ಸಾಧ್ಯವೇ 15 ಜನರಿಂದ ಲಕ್ಷಾಂತರ ಜನರ ಬದುಕು ಸಂಕಷ್ಟದಲ್ಲಿ ಸಿಲುಕುವದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಎರಡು ರಾಜಕೀಯ ಪಕ್ಷದ ವಕ್ತಾರು ತಮ್ಮ ಸರಕಾರ ಕಾಫಿ ಬೆಳೆಗಾರರಿಗೆ ಸೌಲಭ್ಯ ನೀಡುತ್ತಿದೆ ಎಂದು ಸುಳ್ಳು ಸಂದೇಶ ರವಾನಿಸುತ್ತಿದ್ದಾರೆ. ಆದರೆ ಎನ್ಡಿಎ ಮತ್ತು ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಅವರು ಕಾಫಿ ಬೆಳೆಗಾರರಿಗೆ ನೀಡಿದ ಸವಲತ್ತನ್ನು 15 ದಿನದೊಳಗೆ ಬಹಿರಂಗ ಪಡಿಸಬೇಕು ಇಲ್ಲವಾದರೆ ಆ ಮಾಹಿತಿಯನ್ನು ನಾವು ಜನತೆಯ ಮುಂದಿಡುತ್ತಿದ್ದೇವೆ ಎಂದು ಸವಾಲು ಹಾಕಿದರು.
ಮತ್ತೋರ್ವ ಸದಸ್ಯ ಕೀಪಾಡಂಡ ಮಧು ಬೋಪಣ್ಣ ಮಾತನಾಡಿ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಕಾಫಿ ಬೆಳೆಗಾರರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬದು ಮೊದಲ ನೋಟಕ್ಕೆ ಕಂಡುಬರುತ್ತಿದೆ. ಇವರು ಇನ್ನಾದರೂ ಒಳ್ಳೆಯ ಕಾರ್ಯ ಮಾಡುವಂತಿದ್ದರೆ ಸಂಸದರ ಮೂಲಕ ಕೇಂದ್ರ ಸರಕಾರಕ್ಕೆ ಒತ್ತಡ ಹೇರಲಿ ಎಂದು ಒತ್ತಾಯಿಸಿದರು.
ಜಿನ್ನು ನಾಣಯ್ಯ ಮಾತನಾಡಿ ಶಾಸಕರು, ರೈತರು ಆರ್.ಟಿ.ಸಿ ಯ ಬೆಳೆ ಕಾಲಂನಲ್ಲಿ ತಮ್ಮ ಬೆಳೆಯನ್ನು ನಮೂದಿಸಿಕೊಳ್ಳಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಬೆಳೆ ನಮೂದಿಸುವದು ಬೆಳೆಗಾರರೇ ಅಥವಾ ಅಧಿಕಾರಿಯೇ ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳಿಂದ ಕೆಲಸ ಮಾಡಿಸಲು ಸಾಧ್ಯವಿಲ್ಲದ ಶಾಸಕರು ರೈತರಿಗೆ ಪುಕ್ಕಟೆ ಸಲಹೆ ನೀಡುತ್ತಿದ್ದಾರೆ. ಜಿಲ್ಲೆಯ ಕಾಫಿ ಬಹುವಾರ್ಷಿಕ ಬೆಳೆ ಎಂದು ತಿಳಿದಿದ್ದರೂ ಪ್ರತೀ ವರ್ಷ ಇದರ ನೋಂದಾವಣೆಯ ಅಗತ್ಯವಿದೆಯೇ, ಬೆಳೆ ನೋಂದಾಯಿಸಲು ವಾರ್ಷಿಕ ಮೂರು ಬೆಳೆ ಬೆಳೆಯುವ ಜಿಲ್ಲೆಯ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಶಾಸಕರಿಗೆ ರೈತರ ಬಗ್ಗೆ ನೈಜ ಕಾಳಜಿಯಿದ್ದರೆ ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಿ ಎಂದು ಹೇಳಿದರು.