ಸೋಮವಾರಪೇಟೆ, ಜು. 26: ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ರೋಟರಿ ಸಂಸ್ಥೆ ಇವರ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಾಗಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಇಲ್ಲಿನ ಜೆಎಂಎಫ್‍ಸಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ಯಾಮ್ ಪ್ರಕಾಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸುಪರ್ಣಾ ಮಾನಸಿಕ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳದ ವಿದ್ಯಾರ್ಥಿ ತನ್ನ ಗುರಿ ತಲಪುವದು ಕಷ್ಟಕರ. ಪ್ರತಿಯೊಬ್ಬರು ಮಾನಸಿಕ ಆರೋಗ್ಯದ ಕಡೆ ಗಮನ ನೀಡಬೇಕು. ಒಳ್ಳೆಯದನ್ನೇ ಛಿಯೋಚಿಸಬೇಕು. ದುಶ್ಚಟಗಳಿಂದ ದೂರವಿರಬೇಕು. ಭಯ, ಕೋಪವನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳಬೇಕು. ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸ ಬಾರದು ಎಂದು ಹೇಳಿದರು. ಯಾವಾಗಲೂ ಚಿಂತೆ ಮಾಡುವದು, ಕೆಲಸದ ಮೇಲೆ ಹಾಗೂ ಓದಿನ ಆಸಕ್ತಿ ಕಳೆದುಕೊಳ್ಳುವದು. ಕಾರಣ ವಿಲ್ಲದೆ ದು:ಖ, ಕೋಪ, ನಿದ್ರಾ ಹೀನತೆ ಇತ್ಯಾದಿಗಳಿಂದ ಬಳಲು ತ್ತಿದ್ದರೆ ಕೂಡಲೇ ಮನೋವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ, ವಕೀಲರಾದ ಹೆಚ್.ಎಸ್. ಚಂದ್ರಶೇಖರ್, ಕೆ.ಸಿ. ಭರತ್, ಪ್ರಾಂಶುಪಾಲ ಪ್ರೊ. ಶಿವಕುಮಾರ್, ಪ್ರಾಧ್ಯಾಪಕರಾದ ಪ್ರೊ. ಕರಿಯಪ್ಪ ರೈ, ಪ್ರೊ. ಶಿವಕುಮಾರ್, ಎಆರ್‍ಎಫ್‍ಒ ಲಾಲ್ ಸಾಬ್ ಅವರುಗಳು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು. ವನ ಮಹೋತ್ಸವ ಅಂಗವಾಗಿ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.