ಸಿದ್ದಾಪುರ, ಡಿ. 18: ಮಾಲ್ದಾರೆ ಸಮೀಪದ ಆಸ್ಥಾನ ಹಾಡಿಯಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ ಅಂಗವಾಗಿ ಕಾನೂನು ಅರಿವು ಶಿಬಿರ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕ್ರಿಯಾಶೀಲ ಅಭಿವೃದ್ಧಿ ಸಂಸ್ಥೆ ಹಾಗೂ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಸ್ಥಾನ ಹಾಡಿಯ ಮೈದಾನದಲ್ಲಿ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮೋಹನ್‍ಪ್ರಭು ಶಿಬಿರವನ್ನು ಉದ್ಘಾಟಸಿ ಮಾತನಾಡಿ, ಪ್ರತಿಯೊಬ್ಬರು ಕಾನೂನು ಅರಿವಿನ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹಾಡಿಯ ನಿವಾಸಿಗಳಿಗೆ ಕರೆ ನೀಡಿದರು,

ವಕೀಲ ಬಿ.ಕೆ. ಶ್ರೀಧರ್ ಅರಣ್ಯ ಮತ್ತು ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಚಿನ್ನಮ್ಮ, ಮಾಲ್ದಾರೆ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಎಂ.ಎಸ್ ರಾಜು, ಗ್ರಾಮ ಪಂಚಾಯಿತಿ ಸದಸ್ಯೆಯರಾದ ಸುಶೀಲ, ವಾರಿಜ, ವಲಯ ಅರಣ್ಯಾಧಿಕಾರಿ ನೆಹರು, ಕಂದಾಯ ಪರಿವೀಕ್ಷಕ ಶ್ರೀನಿವಾಸ್, ಕ್ರಿಯಾಶೀಲ ಅಭಿವೃದ್ಧಿ ಸಂಸ್ಥೆಯ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಫಾತಿಮಾ, ಪ್ರಧಾನ ಕಾರ್ಯದರ್ಶಿ ನಾರಾಯಣ್, ಜಿಲ್ಲಾ ಅಧ್ಯಕ್ಷ ಜಿನ್ನು ನಾಣಯ್ಯ, ಉಪಾಧ್ಯಕ್ಷ ಮುನೀರ್, ಕಾರ್ಯದರ್ಶಿ ಪ್ರೇಮಲತಾ, ಸದಸ್ಯೆ ಕಾವೇರಮ್ಮ, ಹಾಡಿಯ ಪ್ರಮುಖರಾದ ವೈ.ಕೆ ಮಾದ, ಕಿರಣ್, ಪಿ.ಕೆ. ಚಂದ, ಸಮಾಜ ಸೇವಕ ಬಾವಾ ಮಾಲ್ದಾರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.