ಸಿದ್ದಾಪುರ, ಡಿ. 10: ಕಾಡಾನೆಗಳ ಮಧ್ಯೆ ಕಾದಾಟ ನಡೆದು ಒಂಟಿ ಸಲಗವೊಂದು ಸಾವನ್ನಪ್ಪಿರುವ ಘಟನೆ ಇಲ್ಲಿಗೆ ಸಮೀಪದ ಪಾಲಿಬೆಟ್ಟದಲ್ಲಿ ನಡೆದಿದೆ. ಅಲ್ಲಿನ ಟಾಟಾ ಸಂಸ್ಥೆಗೆ ಸೇರಿದ ಹೊಸಳ್ಳಿ ತೋಟದಲ್ಲಿ ಇಂದು ಬೆಳಿಗ್ಗೆ ಅಂದಾಜು 50-55 ಪ್ರಾಯದ ಕಾಡಾನೆ ಸತ್ತು ಬಿದ್ದಿರುವದು ಗೋಚರಿಸಿದೆ. ಆನೆಯ ಮುಖ ಹಾಗೂ ತಲೆಯ ಭಾಗಕ್ಕೆ ಗಾಯವಾಗಿರುವದು ಗೋಚರಿಸಿದೆ. ಸ್ಥಳಕ್ಕೆ ವಲಯಾರಣ್ಯಾಧಿಕಾರಿ ಗೋಪಾಲ್ ಭೇಟಿ ನೀಡಿದ್ದು, ವನ್ಯಜೀವಿ ವೈದ್ಯಾಧಿಕಾರಿ ಡಾ. ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.