ಕೂಡಿಗೆ, ಸೆ. 23: ಕೂಡಿಗೆ ಗ್ರಾಮ ಪಂಚಾಯ್ತಿಯ ರೂ. 2 ಲಕ್ಷ ಅನುದಾನದಲ್ಲಿ ಕೂಡಿಗೆ ಗ್ರಾಮದ ಹಳೇ ಕೂಡಿಗೆ ಪರಿಶಿಷ್ಟ ಜಾತಿ, ಕಾಲೋನಿಗೆ ಕಾಂಕ್ರೀಟ್ ರಸ್ತೆಯ ಭೂಮಿಪೂಜೆ ಕಾರ್ಯಕ್ರಮವನ್ನು ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ, ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯರುಗಳಾದ ಕೆ.ಆರ್. ರವಿ, ಕೆ.ಟಿ. ಈರಯ್ಯ, ರತ್ನಮ್ಮ, ಕೆ.ಜಿ. ಮೋಹಿನಿ, ಟಿ.ಕೆ. ವಿಶ್ವನಾಥ್ ಗ್ರಾ.ಪಂ. ಕಾರ್ಯದರ್ಶಿ ಸ್ವಾಮಿನಾಯಕ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು.