ಗೋಣಿಕೊಪ್ಪಲು, ಜು. 27: ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ಜೂ. 9 ರಂದು ರಾತ್ರಿ ನಡೆದ 26 ಚೀಲ ಕಾಳುಮೆಣಸು ಹಾಗೂ ನಗದು ಕಳ್ಳತನ ಒಳಗೊಂಡಂತೆ ಪೆÇನ್ನಂಪೇಟೆ, ವೀರಾಜಪೇಟೆ, ಮಡಿಕೇರಿ, ಕುಶಾಲನಗರ ಹಾಗೂ ಹೆಬ್ಬಾಲೆಯಲ್ಲಿ ನಡೆದ ವ್ಯವಸ್ಥಿತ ಕಳವು ಪ್ರಕರಣವನ್ನು ಕೊಡಗು ಪೆÇಲೀಸ್ ಇಲಾಖೆ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಸುಮಾರು ರೂ. 27.43 ಲಕ್ಷದ ಮಾಲನ್ನು ಹಾಗೂ ಕಳ್ಳತನಕ್ಕೆ ಬಳಸಲಾದ ಆಯುಧಗಳು ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡು ಎಂಟು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ತಲೆ ಮರೆಸಿ ಕೊಂಡಿದ್ದು ಶೀಘ್ರವೇ ಬಂಧಿಸುವದಾಗಿ ಜಿಲ್ಲಾ ಪೆÇಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇಂದು ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಪೆÇಲೀಸ್ ನಿರೀಕ್ಷಕರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾ.26 ರಂದು ಅಪರಾಹ್ನ 3.30 ಗಂಟೆಗೆ ಕುಶಾಲನಗರ ಕೊಪ್ಪ ಗೇಟ್ ಬಳಿ ಅರಣ್ಯ ಚೆಕ್ ಪೆÇೀಸ್ಟ್ ಸಮೀಪ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಜಿಲ್ಲೆ ಹಾಗೂ ಹೊರಜಿಲ್ಲೆಯಲ್ಲಿ ನಡೆದ ಕಳವು ಕೃತ್ಯ ಬಯಲಾಗಿದೆ. ಪೆÇನ್ನಂಪೇಟೆಯ ವ್ಯಕ್ತಿಗೆ ಸೇರಿದ್ದೆನ್ನಲಾದ ಆಟೋ ರಿಕ್ಷಾವನ್ನು (ಕೆ.ಎ.-12, ಬಿ-3452) ಬೀಟ್ ಪೆÇಲೀಸರಾದ ಕುಶಾಲನಗರ ಪೆÇಲೀಸ್ ಸಿಬ್ಬಂದಿಗಳಾದ ಲೋಕೇಶ್, ಹೋಂ ಗಾರ್ಡ್ ಸಂತೋಷ್ ಅನುಮಾನದ ಮೇರೆ ತಪಾಸಣೆ ನಡೆಸಿದಾಗ ಸೀಟಿನ ಹಿಂಭಾಗದ ಡಿಕ್ಕಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಬಳಸುವಂತಹ ಸಲಕರಣೆಗಳಾದ ಡ್ರಿಲ್ಲಿಂಗ್ ಮೆಷಿನ್, ಎಕ್ಸಲ್ ಬ್ಲೇಡ್, ಫ್ರೇಮ್, ಡ್ರ್ಯಾಗರ್, ಚಾಕು, ಕಟ್ಟಿಂಗ್ ಪ್ಲೇಯರ್, ಸುತ್ತಿಗೆ, ಸ್ಕ್ರೂ ಡ್ರೈವರ್, ಹಾರೆ, ಮಂಕಿ ಕ್ಯಾಪ್, ಗ್ಲೌಸ್, ಮಾಸ್ಟರ್ ಕೀ ಬಂಚ್ ಇತ್ಯಾದಿಗಳು ಬ್ಯಾಗ್‍ನಲ್ಲಿಟ್ಟಿರುವದು ಪತ್ತೆಯಾಗಿದೆ. ಇದೇ ಸಂದರ್ಭ ಇಬ್ಬರು ವ್ಯಕ್ತಿಗಳ ಪ್ಯಾಂಟ್ ಜೇಬಿನಲ್ಲಿ ಚಾಕುಗಳು ಕಂಡು ಬಂದು ಬೀಟ್ ಕರ್ತವ್ಯದಲ್ಲಿ ಇದ್ದ ಲೋಕೇಶ್ ಹಾಗೂ ಹೋಮ್ ಗಾರ್ಡ್ ಪ್ರಸನ್ನ ನೆರವಿಗೆ ಐವರನ್ನು ವಶಕ್ಕೆ ಪಡೆಯುವ ಸಂದರ್ಭ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಓರ್ವ ಆರೋಪಿ ಕಾವೇರಿ ನದಿಗೆ ಸೇತುವೆ ಮೇಲಿನಿಂದ ಧುಮುಕಿ ಪರಾರಿಯಾಗಿದ್ದಾನೆ ಎಂದು ತಿಳಿಸಿದರು.
ಮೂಲತಃ ಪೆÇನ್ನಂಪೇಟೆ ಸಮೀಪ ಕಿರುಗೂರು ಗ್ರಾಮದ ಮತ್ತೂರು ನಿವಾಸಿಗಳಾದ, ಸಹೋದರರಾದ ಹರೀಶ್ ಮತ್ತು ಸೋನು ಎಂಬವರನ್ನು ಬಂಧಿಸಿ ಕುಶಾಲನಗರ ಪೆÇಲೀಸ್ ಠಾಣೆಗೆ ಕರೆತಂದು ಪ್ರಾರಂಭಿಕ ತನಿಖೆ ನಡೆಸಿದಾಗ ಪೆÇಲೀಸರಿಂದ ತಪ್ಪಿಸಿಕೊಂಡ ಆರೋಪಿಗಳು ರಾಜೇಶ್ ಬೈರಾಜ್ ಕೋಡಿಹಳ್ಳಿ, ಕನಕಪುರ ನಿವಾಸಿ, ರಮೇಶ್ ಹೊಳೆನರಸೀಪುರ (ಮುತ್ತಿಗೆ ಹೀರೇಹಳ್ಳಿ) ಹಾಗೂ ಕೆ.ಆರ್. ನಗರದ ಮಾದೇಶ್ ಎಂಬದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತದೆ. ಬೈಲುಕುಪ್ಪೆಯಲ್ಲಿ ರಾತ್ರಿ ವೇಳೆ ಅಂಗಡಿ ಮಳಿಗೆ ಕಳ್ಳತನಕ್ಕಾಗಿ ಪೆÇನ್ನಂಪೇಟೆ ಯಿಂದ ಬಂದಿರುವದಾಗಿ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ವಿಚಾರಣೆ ಸಂದರ್ಭ ಗೋಣಿಕೊಪ್ಪಲು ಎಪಿಎಂಸಿ ಯಾರ್ಡ್ ನಿಂದ ರೂ. 9 ಲಕ್ಷ ಮೌಲ್ಯದ ತಲಾ 50 ಕೆ.ಜಿ. ತೂಕದ 26 ಚೀಲ ಕಾಳುಮೆಣಸು ಹಾಗೂ ಒಂದು ಲ್ಯಾಪ್ ಟಾಪ್, ಮತ್ತು ರೂ. 6.46 ಸಾವಿರ ನಗದನ್ನು ಅಪಹರಿಸಲಾಗಿದ್ದು, ಪೆÇನ್ನಂಪೇಟೆ ಸಮೀಪ ಮತ್ತೂರುವಿನ ಹರೀಶ್ ಹಾಗೂ ಸೋನುವಿನ ಮನೆಯಲ್ಲಿ ಅಡಗಿಸಿಡಲಾಗಿರುವ ಮಾಹಿತಿ ಸಿಕ್ಕಿದೆ.
ಈ ಹಂತದಲ್ಲಿ ಸುಮಾರು 800 ಕೆ.ಜಿ. ಕಾಳುಮೆಣಸು ಪತ್ತೆಯಾಗಿದೆ. ಪೆÇನ್ನಂಪೇಟೆ ಠಾಣಾ ವ್ಯಾಪ್ತಿಯ ಚಿರಿಯಪಂಡ ಉತ್ತಪ್ಪ ಅವರಿಗೆ ಸೇರಿದ ಸುಮಾರು ರೂ. 5.60 ಲಕ್ಷ ಮೌಲ್ಯದ ಕಾಳುಮೆಣಸು ಕಳವು ಮಾಡಿರುವದಾಗಿ ಆರೋಪಿಗಳು ತಪೆÇ್ಪಪ್ಪಿಕೊಳ್ಳುತ್ತಾರೆ. ಈ ನಡುವೆ ಕಳವು ಮಾಡಲಾದ ಹಣದಲ್ಲಿ ರೂ. 96 ಸಾವಿರ ಮೌಲ್ಯದ ಟಿವಿಎಸ್ ಅಪಾಚಿ ಬೈಕ್, ರೂ. 61 ಸಾವಿರ ಮೌಲ್ಯದ ಟಿವಿಎಸ್ ಮೋಟಾರ್ ಸೈಕಲ್, ಕರಿಷ್ಮ ಮೋಟಾರ್ ಬೈಕ್ ರೂ.68 ಸಾವಿರ ಮೊತ್ತ ನೀಡಿ ಖರೀದಿಸಿದ್ದಾರೆ. ಇದೇ ಸಂದರ್ಭ ಪೆÇಲೀಸರು ಖಚಿತ ಮಾಹಿತಿ ಮೇರೆ ಆರೋಪಿಗಳು ಕಾಳುಮೆಣಸು ಕಳವಿಗೆ ಬಳಸುತ್ತಿದ್ದ ಎರಡು ಮಾಕ್ಸಿಮಾ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ಬಿ.ಎಂ. ಅರುಣಾ ಅವರ ವಿಮಲೇಶ್ ಜುವೆಲ್ಲರಿಗೆ ನುಸುಳಿ ಸುಮಾರು ರೂ. 1 ಲಕ್ಷ ಮೌಲ್ಯದ 2.50 ಕೆ.ಜಿ. ಬೆಳ್ಳಿಯನ್ನು ಕಳವು ಮಾಡಲಾಗಿದ್ದು, ಹೊಳೆನರ ಸೀಪುರದಿಂದ ಮಾಲನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.
ವೀರಾಜಪೇಟೆ ನಳಿನಿ ನಂಜಮ್ಮ ಅವರ ಮನೆಗೆ ಕನ್ನಹಾಕಿ ಸುಮಾರು ರೂ. 38 ಸಾವಿರ ಮೌಲ್ಯದ ಸೋನಿ ಟಿ.ವಿ. ಅಪಹರಿಸಿದ್ದು, ಪೆÇಲೀಸರು ಇದೀಗ ವಶಕ್ಕೆ ತೆಗೆದುಕೊಂಡಿದ್ದಾರೆ.
ಗೋಣಿಕೊಪ್ಪಲು ಪೆÇಲೀಸ್ ಠಾಣಾ ವ್ಯಾಪ್ತಿಯ ಪೈಸಲ್ ಎಂಬವರ ಕಾಳುಮೆಣಸು ಮಳಿಗೆಗೆ ನುಸುಳಿ ರೂ. 19500 ಮೌಲ್ಯದ 20 ಕೆ.ಜಿ. ಕಾಳುಮೆಣಸು, 40 ಕೆ.ಜಿ. ಕಾಫಿ ಬೀಜ ಹಾಗೂ ವಿ ಗಾರ್ಡ್ ವಾಲ್ ಫ್ಯಾನ್ ಕಳವು ಮಾಡಿದ್ದು, ಕಳವು ಮಾಲನ್ನು ಮರುದಿನ ಅದೇ ಮಾಲೀಕನಿಗೆ ಖದೀಮರು ಮಾರಾಟ ಮಾಡಿದ್ದಾರೆ.
ಕುಶಾಲನಗರ ಪೆÇಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಲೋಕೇಶ್ ಅವರ ಮೊಬೈಲ್ ಅಂಗಡಿ ಕಳವು ಪ್ರಕರಣದಲ್ಲಿ 6 ಮೊಬೈಲ್ ಮತ್ತು ರೂ.1500 ನಗದು ಒಳಗೊಂಡಂತೆ ಅಂದಾಜು ರೂ. 10000 ಹಾಗೂ ಕೃತ್ಯಕ್ಕೆ ಬಳಸಿದ ಹೀರೋ ಹೋಂಡಾ ಮೋಟಾರ್ ಬೈಕನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ಕನಕಪುರದ ರಾಜೇಶ್ ಎಂಬಾತ ಬೆಂಗಳೂರಿನಲ್ಲಿ ಯುವಕನ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿ ಕೇಂದ್ರ ಕಾರಾಗೃಹದಲ್ಲಿ ಮೂರು ವರ್ಷಗಳಿಗೂ ಅಧಿಕ ಸೆರೆವಾಸ ಅನುಭವಿಸಿ ಬಂದವನಾಗಿರುತ್ತಾನೆ. 8 ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು 10 ಆರೋಪಿಗಳಲ್ಲಿ ಮಾದೇಶ ಹಾಗೂ ಸಂತೋಷ್ ಎಂಬವರು ಪರಾರಿ ಯಾಗಿರುವದಾಗಿ ಪೆÇಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಉಳಿದಂತೆ ಹರೀಶ್, ಸೋನು, ರಾಜೇಶ್, ರಮೇಶ್, ಕಾರ್ಯಪ್ಪ, ಶಿವು, ಗಣೇಶ್, ರವಿ ಇವರುಗಳನ್ನು ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ತಂಡ ಹಾಗೂ ಜಿಲ್ಲಾ ಪೆÇಲೀಸರ ತಂಡ ಬಂಧಿಸಿದ್ದು ಇದೀಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಭಾರೀ ಕಳವು ಪ್ರಕರಣ ಭೇದಿಸುವಲ್ಲಿ ಕುಶಾಲನಗರದ ಪೆÇಲೀಸ್ ಲೋಕೇಶ್‍ದ್ವಯರು, ಹೋಂ ಗಾರ್ಡ್ ಸಂತೋಷ್ ಮತ್ತು ಪ್ರಸನ್ನ, ಜಿಲ್ಲಾ ಅಪರಾಧ ಪತ್ತೆದಳದ ಪೆÇಲೀಸ್ ನಿರೀಕ್ಷಕ ಲಿಂಗಪ್ಪ ಮತ್ತು ತಂಡ, ಸೋಮವಾರಪೇಟೆ ಡಿವೈಎಸ್‍ಪಿ ಟಿ.ಕುಮಾರ್ ನೇತೃತ್ವ ದಲ್ಲಿ ಪ್ರತ್ಯೇಕ ತಂಡ, ಸುಂಟಿಕೊಪ್ಪ ಪೆÇಲೀಸ್ ಉಪನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದ ತಂಡ, ಕುಶಾಲನಗರ ಪೆÇಲೀಸ್ ಉಪನಿರೀಕ್ಷಕ ಪೂಣಚ್ಚ ನೇತೃತ್ವದ ತಂಡ, ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ನಿರ್ದೇಶನದಲ್ಲಿ ಗೋಣಿ ಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಗೋವಿಂದರಾಜು ಹಾಗೂ ಪೆÇನ್ನಂ ಪೇಟೆ ಪೆÇಲೀಸ್ ಉಪನಿರೀಕ್ಷಕ ಜಯರಾಮ್ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸುವ ಮೂಲಕ ಖದೀಮರ ಜಾಲವನ್ನು ಕೊಡಗು ಪೆÇಲೀಸ್ ತಂಡ ಯಶಸ್ವಿಯಾಗಿ ಭೇದಿಸಿದೆ.
ಡಿಸಿಐಬಿ ಪೆÇಲೀಸ್ ನಿರೀಕ್ಷಕ ಲಿಂಗಪ್ಪ ಅವರ ತಂಡದ ತಮ್ಮಯ್ಯ, ವೆಂಕಟೇಶ್, ಅನಿಲ್, ವಸಂತ್, ಯೋಗೀಶ್, ನಿರಂಜನ್, ಚಾಲಕ ಶಶಿಕುಮಾರ್, ಮಡಿಕೇರಿ ಡಿಸಿಬಿ ತಂಡದ ಕಾರ್ಯಪ್ಪ, ಸುಬ್ರಮಣಿ, ಸಲ್ಡಾನ, ಗೋಪಾಲ, ಡ್ಯಾನಿಯಲ್, ಪ್ರಕಾಶ್, ಪೆÇನ್ನಂಪೇಟೆ ಠಾಣೆಯ ಎಎಸ್‍ಐ ಹಮೀದ್, ಗೋಣಿಕೊಪ್ಪಲು ಕ್ರೈಮ್ ಎಎಸ್‍ಐ ರಾಜು ಮುಂತಾದವರು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೊಡಗು ಪೆÇಲೀಸರ ಕಾರ್ಯಾಚರಣೆಗೆ ಹರ್ಷ ವ್ಯಕ್ತಪಡಿಸಿದ ಜಿಲ್ಲಾ ಪೆÇಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅವರು, ಇದೇ ಖದೀಮರು ಪಿರಿಯಾಪಟ್ಟಣ ಒಳಗೊಂಡಂತೆ ಹಲವು ಜಿಲ್ಲೆಗಳಲ್ಲಿ ಕೃತ್ಯ ಎಸಗಿರುವ ಸಂಶಯವಿದ್ದು, ನ್ಯಾಯಾಲಯದಿಂದ ಮತ್ತಷ್ಟು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡು ಹೆಚ್ಚಿನ ತನಿಖೆ ನಡೆಸಲಾಗುವದು ಎಂದು ಹೇಳಿದರು. ಕಳವು ನಡೆದ ಸ್ಥಳದಲ್ಲಿ ಲಕ್ಷಾಂತರ ನಗದು ಇರಿಸಿದ ವರ್ತಕರ ಬೇಜವಾಬ್ದಾರಿತನ, ಸಿಸಿ ಟಿವಿ ಅಳವಡಿಸದಿರುವದು, ಗೋಣಿ ಕೊಪ್ಪಲು ಎಪಿಎಂಸಿ ಯಾರ್ಡ್‍ನಲ್ಲಿ ಅಗತ್ಯ ಭದ್ರತಾ ಸಿಬ್ಬಂದಿ ಇಲ್ಲದಿರುವದು, ವಾಹನ ತೆರಳುವ ಹಾದಿಯಲ್ಲಿ ಸಿಸಿ ಟಿವಿ ಅಳವಡಿಸ ದಿರುವದು ಖದೀಮರಿಗೆ ಸುಲಭ ತುತ್ತಾಗಿದೆ ಎಂದು ಹೇಳಿದರು.
ಖದೀಮರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಗೋಣಿಕೊಪ್ಪಲು ವರ್ತಕರ ರೂ. 46 ಸಾವಿರ ನಗದು ಮಾತ್ರ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮುಂದೆ ಸ್ವತ್ತುಗಳ ಹರಾಜು ನಡೆಸಿ, ನಗದು ಕಳೆದುಕೊಂಡಿರುವವರಿಗೆ ನೀಡುವದಾಗಿ ಹೇಳಿದರು. ಕುಶಾಲನಗರದಲ್ಲಿ ಸ್ಪೇರ್ ಪಾಟ್ರ್ಸ್ ಮಳಿಗೆ, ದಿನಸಿ ಅಂಗಡಿ ಗಳಲ್ಲಿಯೂ ಕಳ್ಳತನ ಮಾಡಿದ್ದು ಮುಂದೆ ಮತ್ತಷ್ಟು ಪ್ರಕರಣವನ್ನು ಬಯಲಿಗೆಳೆಯ ಲಾಗುವದು ಎಂದು ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು.
-ವರದಿ:- ಟಿ.ಎಲ್. ಶ್ರೀನಿವಾಸ್