*ಗೋಣಿಕೊಪ್ಪಲು, ಸೆ. 20 : ಇಲ್ಲಿನ ಔಷಧಿ ಅಂಗಡಿಯ ಮಾಲೀಕ ಕೃಷ್ಣಪ್ಪನವರ ಮನೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಚಿನ್ನಾಭರಣ ಕಳವು ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಮಂಗಳವಾರ ಬಂಧಿಸಿದ್ದರು. ಬೆಂಗಳೂರು ಮೂಲದ ಮನು ಹಾಗೂ ವೀರಾಜಪೇಟೆಯ ಅಲೆಕ್ಷ್ ಆಲಿಯಾಸ್ ಚೋಟು ಬಂಧಿತ ಆರೋಪಿಗಳು. ಬಂಧಿತರಿಂದ 135 ಗ್ರಾಂ ಚಿನ್ನಾಭರಣ 10 ಸಾವಿರ ನಗದು, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಒಂದು ವರ್ಷದ ಹಿಂದೆ ರಾತ್ರಿ ವೇಳೆ ಮನೆಗೆ ನುಗ್ಗಿದ ಆರೋಪಿಗಳು ಮನೆಯ ಹಿಂದಿನ ಬಾಗಿಲಿನ ಮೂಲಕ ಪ್ರವೇಶಿಸಿ ಚಿನ್ನಾಭರಣ ಕಳವು ಮಾಡಿದ್ದರು. ಇವರಲ್ಲಿ ಕೈಕೇರಿ ಗ್ರಾಮದ ಮೂರ್ತಿ ಎಂಬವರÀನ್ನು ಘಟನೆ ನಡೆದ ಮೂರು ದಿನದಲ್ಲಿಯೇ ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಮನು ಎಂಬಾತ ಮುಂಬೈಗೆ ತೆರಳಿ ಅಲ್ಲಿ ಲಾರಿಯಲ್ಲಿ ಕೆಲಸದಲ್ಲಿ ತೊಡಗಿದ್ದ. ಮಂಗಳವಾರ ಪಿರಿಯಾಪಟ್ಟಣಕ್ಕೆ ಲಾರಿಯಲ್ಲಿ ಬರುವ ಸುಳಿವು ಅರಿತ ಪೊಲೀಸರು ಆತನನ್ನು ಬಂಧಿಸುವಲ್ಲಿ ಸಫಲರಾದರು. ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇರೆಗೆ ವೀರಾಜಪೇಟೆಯ ಚೋಟುವನ್ನು ಬಂಧಿಸಿದರು.

ಎಸ್‍ಪಿ ರಾಜೇಂದ್ರಪ್ರಸಾದ್ ಹಾಗೂ ಡಿವೈಎಸ್‍ಪಿ ನಾಗಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪಲು ಸಿಪಿಐ ಪಿ.ಕೆ.ರಾಜು, ಅಪರಾಧ ವಿಭಾಗದ ಸಬ್‍ಇನ್ಸ್‍ಪೆಕ್ಟರ್ ರಾಜು, ಎಎಸ್‍ಐ ಹಮೀದ್, ಸಿಬ್ಬಂದಿಗಳಾದ ಕೃಷ್ಣ, ಅಬ್ದುಲ್ ಮಜೀದ್, ಮೋಹನ್, ನಾಗೇಶ್, ಹರೀಶ್, ಮಹಮ್ಮದ್, ಕುಮಾರ್ ಪಾಲ್ಗೊಂಡಿದ್ದರು. -ಚಿತ್ರ-ವರದಿ : ಎನ್.ಎನ್.ದಿನೇಶ್