ಮಡಿಕೇರಿ, ಜ. 29: ನಗರದ ಶಿಶು ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ಕಲಾಶ್ರೀ ಶಿಬಿರದಲ್ಲಿ ಮೂರು ತಾಲೂಕುಗಳಲ್ಲಿ ತಾಲೂಕು ಮಟ್ಟದ ಕಲಾಶ್ರೀ ಶಿಬಿರದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಲಾ 8 ರಂತೆ 24 ಮಕ್ಕಳು ಭಾಗವಹಿಸಿದ್ದರು.
ಅವರಲ್ಲಿ ತಲಾ 2 ರಂತೆ 8 ಮಕ್ಕಳನ್ನು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಅವರಲ್ಲಿ ವಿಜ್ಞಾನದಲ್ಲಿ ನೂತನ ಆವಿಷ್ಕಾರ ಮಾದರಿ ಪ್ರದರ್ಶನದಲ್ಲಿ ನಗರದ ಜನರಲ್ ತಿಮ್ಮಯ್ಯ ಶಾಲೆಯ ಆಶಿನ್ ಕೃಷ್ಣ ಪ್ರಥಮ ಸ್ಥಾನ, ಚೌಡ್ಲು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಆಯುಷ್ ದ್ವಿತೀಯ, ಸೃಜನಾತ್ಮಕ ಬರವಣಿಗೆಯಲ್ಲಿ ಎಂ.ಯು. ಶ್ರಾವಣಿ, ಓ.ಎಲ್.ವಿ. ಪ್ರೌಢಶಾಲೆ, ಸೋಮವಾರಪೇಟೆ ಪ್ರಥಮ ಹಾಗೂ ಪಿ.ಎಸ್. ಅನುಷಾ, ಸಂತ ಅನ್ನಮ್ಮ ಪ್ರೌಢಶಾಲೆ, ವೀರಾಜಪೇಟೆ ದ್ವಿತೀಯ, ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಶ್ರದ್ದಾ ಶಾಸ್ತ್ರೀ, ಜನರಲ್ ತಿಮ್ಮಯ್ಯ ಶಾಲೆ ಮಡಿಕೇರಿ, ಪ್ರಥಮ ಹಾಗೂ ಸುಧನ್ವ. ಎಸ್. ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆ, ಸೋಮವಾರಪೇಟೆ ದ್ವಿತೀಯ, ಸೃಜನಾತ್ಮಕ ಕಲೆಯಲ್ಲಿ ಪಿ.ಆರ್. ಆರ್ಯ, ಕೊಡಗು ವಿದ್ಯಾಲಯ, ಮಡಿಕೇರಿ ಪ್ರಥಮ ಹಾಗೂ ಜೆ. ಅಲ್ಫಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.