ಮಡಿಕೇರಿ, ನ. 10: ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಲೆಯನ್ನು ಬೆಳೆಸಿಕೊಳ್ಳುವದು ಸೂಕ್ತ. ಇಂದು ಜಗತ್ತೆ ಒಂದು ಕಲೆಯಾಗಿದ್ದು, ಕಲೆಯನ್ನು ಸಂಘಟಿಸಿ ರಚನಾತ್ಮಕವಾಗಿ ರೂಪುರೇಷೆ ತಯಾರಿಸಿ, ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ಯುವ ಜನಾಂಗದಲ್ಲಿ ಸಂಸ್ಕøತಿ, ಕಲೆಯ ಸದಭಿರುಚಿ ಬೆಳೆಸಿಕೊಳ್ಳಬೇಕೆಂದು ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿ ಹೆಚ್.ಜೆ. ಕುಮಾರ್ ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅವರು ವಿಶೇಷ ಘಟಕ ಯೋಜನೆಯಡಿ ಚೆಂಬು ಗ್ರಾಮದ ಧ್ವಾರಕ ಭವನದಲ್ಲಿ ವಿವಿಧ ಕಲಾ ಪ್ರಕಾರಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲೆಯ ಅವಶ್ಯಕತೆ ಇದ್ದು ಶಿಕ್ಷಣದ ಜೊತೆಗೆ ಸಂಸ್ಕøತಿಯನ್ನು ಉಳಿಸಿ-ಬೆಳೆಸಿಕೊಳ್ಳುವದು ಅವಶ್ಯಕ ಎಂದರು.

ಕಲೆಯಲ್ಲಿ ಲಲಿತ ಕಲೆ, ಶಾಸ್ತ್ರೀಯ ಕಲೆ, ಜಾನಪದ ಕಲೆ, ಸಂಗೀತ, ನೃತ್ಯ, ನಾಟಕ ಹೀಗೆ ಹತ್ತು ಹಲವಾರು ರೀತಿಯಲ್ಲಿ ನಮ್ಮ ನಾಡಿನಲ್ಲಿ ನೋಡಬಹುದಾಗಿದ್ದು, ಇಂತಹ ಕಲೆಗಳನ್ನು ಅಳವಡಿಸಿಕೊಂಡು ಸ್ವಸ್ಥ ಸಮಾಜವನ್ನು ಕಾಣಲು ಸಾಧ್ಯವೆಂದರು.

ಪ್ರಾಸ್ತಾವಿಕ ನುಡಿಯಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪರಿಶಿಷ್ಟ ಜಾತಿ ಕಲಾವಿದರಿಗೆ ವಿಶೇಷ ಘಟಕ ಯೋಜನೆಯಡಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸುವದಕ್ಕೆ ಅವಕಾಶವಿದ್ದು, ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಕಾರ್ಯಕ್ರಮಗಳನ್ನು ನಡೆಸಲು ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿ ಸುಬ್ರಾಯ ನಳಿಕೆಯವರು ಮಾತನಾಡಿ, ಕಾರ್ಯಾಗಾರಗಳು ತರಬೇತಿಗಳಿಂದ ಪರಿಪೂರ್ಣವಾದ ಕಲೆಯನ್ನು ಬಳಸಿಕೊಳ್ಳಲು ಅನುಕೂಲ ಎಂದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಕಲಾವಿದ ಕೆ.ಕೆ. ಬಾಲಕೃಷ್ಣ ವಹಿಸಿ ಮಾತನಾಡಿ, ಕಲೆಗೆ ಹೆಚ್ಚು ಪ್ರೋತ್ಸಾಹ ವನ್ನು ಸರ್ಕಾರ ಮಾಡುತ್ತಿದ್ದು, ಅದರ ಸದ್ಭಳಕೆಯಾಗಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್. ಕುಳ್ಳಯ್ಯ, ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಯೇನೆಕಲ್ಲು, ಚಂದಪ್ಪ ಕಾಂತಬೈಲು ಹಾಜರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಯಕ್ಷಗಾನ ಬಯಲಾಟ, ಜಾನಪದ ಕಲೆ, ಕಂಗೀಲು, ತಾಳಮದ್ದಲೆ ಮುಂತಾದ ಕಲೆಗಳ ಬಗ್ಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮೊದಲಿಗೆ ಯಕ್ಷಗಾನ ಕಲಾವಿದ ಎ.ಬಿ. ಮಾದವ ಸ್ವಾಗತಿಸಿ, ವಂದಿಸಿದರು.