ಕರಿಕೆ, ಸೆ. 28: ಇಲ್ಲಿಗೆ ಸಮೀಪದ ಚೆತ್ತುಕಾಯದ ನ್ಯೂಫ್ರೆಂಡ್ಸ್ ಯುವಕ ಸಂಘದ ವತಿಯಿಂದ 17ನೇ ವರ್ಷದ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕರಿಕೆ ಗ್ರಾ.ಪಂ. ಅಧ್ಯಕ್ಷ ಎಸ್. ಬಾಲಚಂದ್ರ ನಾಯರ್ ಉದ್ಘಾಟಿಸಿದರು. ಜನಾಂಗ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಬಡ್ಡಿ ಪಂದ್ಯಾಟದಲ್ಲಿ ಎಳ್ಳುಕೊಚ್ಚಿ ಗೆಳೆಯರ ಬಳಗ ಪ್ರಥಮ ಸ್ಥಾನ ಪಡೆದರೆ, ದೊಡ್ಡಚೇರಿಯ ರಾಯಲ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಹಾಗೂ ಹಗ್ಗಜಗ್ಗಾಟದಲ್ಲಿ ಪಾಣತ್ತೂರು ತಂಡ ಪ್ರಥಮ ಹಾಗೂ ಚೆತ್ತುಕಾಯ ತಂಡ ದ್ವಿತೀಯ ಸ್ಥಾನ ಗಳಿಸಿತು.
ಸಮಾರೋಪ ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಹೊಸಮನೆ ಕವಿತಾ ಪ್ರಭಾಕರ್, ತಾ.ಪಂ. ಸದಸ್ಯೆ ಸಂಧ್ಯಾ, ಸಂಘದ ಅಧ್ಯಕ್ಷ ಕೆ.ಎ. ಶಿವಪ್ಪ, ಗ್ರಾ.ಪಂ. ಸದಸ್ಯೆ ಉಷಾಕುಮಾರಿ, ಪುರುಷೋತ್ತಮ್, ಉಪವಲಯ ಅರಣ್ಯಾಧಿಕಾರಿ ಬಿ.ಟಿ. ಶಶಿ ಇನ್ನಿತರರಿದ್ದರು.