ಮಡಿಕೇರಿ, ಅ. 2: ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಿಯ ಕರಗ ನಗರ ಪ್ರದಕ್ಷಿಣೆ ಮಾಡಲಿದೆ. ತಾ.3ರಂದು ಮೈಸೂರು ರಸ್ತೆ, ಸುದರ್ಶನ ವೃತ್ತ, ಸೌದೆ ಡಿಪೋ, ಸುದರ್ಶನ ಗೆಸ್ಟ್ ಹೌಸ್ ಕೆಳಭಾಗ, ಜಲಾಶಯ ಬಡಾವಣೆ, ಬ್ರಾಹ್ಮಣರ ಬೀದಿ, ದೇಚೂರು ಬಾಣೆಮೊಟ್ಟೆ, ಪುಟಾಣಿನಗರ.

ತಾ.4ರಂದು ಇಂದಿರಾನಗರ, ಚಾಮುಂಡೇಶ್ವರಿ ನಗರ, ಓಂಕಾರೇಶ್ವರ ದೇವಸ್ಥಾನ ರಸ್ತೆ, ಜೂನಿಯರ್ ಕಾಲೇಜು ರಸ್ತೆ, ಚೈನ್‍ಗೇಟ್, ಗೌಡ ಸಮಾಜ, ದಾಸವಾಳ, ರಾಣಿಪೇಟೆ, ರಾಘವೇಂದ್ರ ದೇವಸ್ಥಾನ.

ತಾ. 6ರಂದು ಸ್ಟಿವರ್ಟ್ ಹಿಲ್, ರೇಸ್ ಕೋರ್ಸ್ ರಸ್ತೆ, ಹೊಸ ಬಡಾವಣೆ, ಡಿ.ಎ.ಆರ್. ಕ್ವಾಟ್ರ್ರಸ್, ಕಾನ್ವೆಂಟ್ ರಸ್ತೆ, ಪತ್ರಿಕಾಭವನ ರಸ್ತೆ.

ತಾ. 7ರಂದು ಬಸ್‍ಸ್ಟ್ಯಾಂಡ್, ಮಾರ್ಕೆಟ್, ಹಿಲ್ ರಸ್ತೆ, ಕೊಹಿನೂರು ರಸ್ತೆ, ಅಪ್ಪಚ್ಚಕವಿ ರಸ್ತೆ, ಗೌಳಿಬೀದಿಯಲ್ಲಿ ಪ್ರದಕ್ಷಿಣೆ ಸಾಗಲಿದೆ.

* ಶ್ರೀ ಕೋಟೆ ಮಾರಿಯಮ್ಮ ದೇವಿಯ ಕರಗ ನಗರ ದರ್ಶನ ಇಂತಿದೆ;

ತಾ. 3ರಂದು ಬೆಳಿಗ್ಗೆ 11.30ಕ್ಕೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆ, 12.30ಕ್ಕೆ ನಗರ ಪ್ರದಕ್ಷಿಣೆ ಹೊರಡುವದು. ಶಾಂತಿನಿಕೇತನಕ್ಕಾಗಿ ಸುದರ್ಶನ ಅತಿಥಿಗೃಹದ ಕೆಳಭಾಗ, ಜಯನಗರ ಬಡಾವಣೆ, ಬ್ರಾಹ್ಮಣರ ಬೀದಿ, ಅಶ್ವತ್ಥಕಟ್ಟೆ, ದೇಚೂರಿಗಾಗಿ ದೇಚೂರು ಶ್ರೀ ರಾಮಮಂದಿರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ಹಿಂದಿರುಗುವದು.

ತಾ.4ರಂದು ಬೆಳಿಗ್ಗೆ 11.30ಕ್ಕೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆ ನಂತರ ಶ್ರೀ ಓಂಕಾರೇಶ್ವರ ದೇವಾಲಯಕ್ಕಾಗಿ ಬ್ರಾಹ್ಮಣರ ಬೀದಿ, ದೇಚೂರು, ಜೂನಿಯರ್ ಕಾಲೇಜು ರಸ್ತೆ, ದಾಸವಾಳ, ಖಾದಿ ಬಂಡಾರಕ್ಕಾಗಿ ಅಪ್ಪಚ್ಚಕವಿ ರಸ್ತೆ, ನಂತರ ಪ್ರಸಾದ್ ಲಾಡ್ಜ್ ಮುಂಭಾಗ ಕ್ಕಾಗಿ ಕೈಗಾರಿಕಾ ಬಡಾವಣೆ, ಡೈರಿ ಫಾರಂ ರಸ್ತೆ, ರಿಮ್ಯಾಂಡ್ ಹೋಂ ಹಿಂಭಾಗ, ಎಲ್.ಐ.ಸಿ. ಕಚೇರಿಗಾಗಿ ರೇಸ್‍ಕೋರ್ಸ್ ರಸ್ತೆಗಾಗಿ ಹಿಂದಿರುಗುವದು.

ತಾ.5ರಂದು ಬೆಳಿಗ್ಗೆ 11.30ಕ್ಕೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆ ನಂತರ 12.30 ಗಂಟೆಗೆ ಪೆನ್ಶನ್‍ಲೇನ್, ಹೊಟೇಲ್ ರಾಜ್‍ದರ್ಶನ್ ಹಿಂಭಾಗದ ಮುನೀಶ್ವರ ದೇವಾಲಯ ಕ್ಕಾಗಿ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪೂಜೆ ನಂತರ ಜಡ್ಜ್ ಕ್ವಾಟ್ರ್ರಸ್‍ಗಾಗಿ ಸ್ಟಿವರ್ಟ್ ಹಿಲ್, ಶ್ರೀ ಪ್ರಸನ್ನ ಗಣಪತಿ ದೇವಾಲಯ, ಹೊಸ ಬಡಾವಣೆ, ಗೌಳಿಬೀದಿಗಾಗಿ ದೇವಾಲಯಕ್ಕೆ ಹಿಂದಿರುಗುವದು.

ನಂತರ ನವರಾತ್ರಿಯವರೆಗೆ ದೇವಾಲಯದಲ್ಲಿ 12.30 ಗಂಟೆಗೆ ಶ್ರೀ ಅಮ್ಮನವರಿಗೆ ನೈವೇದ್ಯ ಪೂಜೆ ಹಾಗೂ ಸಂಜೆ 8.30 ಗಂಟೆಯವರೆಗೆ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಗಳು ನಡೆಯಲಿರುವದು.

ತಾ.10ರಂದು ಸೋಮವಾರ ಆಯುಧಪೂಜೆಯ ಪ್ರಯುಕ್ತ ಬೆಳಿಗ್ಗೆ 6 ಗಂಟೆಯಿಂದ ಸಂಜೆ 8.30 ಗಂಟೆಯವರೆಗೆ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಗಳು ನಡೆಯಲಿರುವದು.

ತಾ. 11ರಂದು ನವರಾತ್ರಿಯ ರಾತ್ರಿ 12 ಗಂಟೆಗೆ ಅಲಂಕೃತ ಕರಗದೊಂದಿಗೆ ಶ್ರೀ ದಂಡಿನ ಮಾರಿಯಮ್ಮ ದೇವಾಲಯಕ್ಕೆ ತೆರಳಿ 4 ಕರಗಗಳು ಎಲ್ಲಾ ದಶಮಂಟಪ ಗಳಿಗೆ ಪೂಜೆ ಸಲ್ಲಿಸಿ ನಂತರ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿದು ದೇವಾಲಯಕ್ಕೆ ಹಿಂತಿರುಗುವದು.

ತಾ. 13ರಂದು ಸಂಜೆ ಕರಗಕ್ಕೆ ಸಂಬಂಧಿಸಿದಂತೆ ‘ಕುಂಭ ಪೂಜೆ' ನಡೆಯುವದರೊಂದಿಗೆ ನವರಾತ್ರಿ ಉತ್ಸವವನ್ನು ಕೊನೆಗೊಳಿಸ ಲಾಗುವದು ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.