*ಗೋಣಿಕೊಪ್ಪ, ಆ. 31: ಪಂಚಾಯತಿಗೆ ಸುಮಾರು 90 ಲಕ್ಷ ಹಣ ಕಂದಾಯ ಬಾಕಿ ಇದ್ದು ಇದರಿಂದ ಪಂಚಾಯತಿಯ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲಿದೆ. ಕಂದಾಯ ವಸೂಲಾತಿ ಮಾಡಲು ಗೋಣಿಕೊಪ್ಪದಲ್ಲಿ ಕಂದಾಯ ಅದಾಲತ್‍ನ್ನು ಮಾಡಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ಗೋಣಿಕೊಪ್ಪಲು ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತ್ತಾಪ ಮಾಡಿದ ಸದಸ್ಯ ಧ್ಯಾನ್ ಸುಬ್ಬಯ್ಯ, ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೆ ಹಣದ ಅವಶ್ಯಕತೆ ಮುಖ್ಯವಾಗಿದ್ದು, ಆದರೆ ಪಂಚಾಯಿತಿಯಿಂದ ಇದುವರೆಗೆ ವ್ಯವಸ್ಥಿತವಾಗಿ ಕಂದಾಯ ಸಂಗ್ರಹಣೆ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಕೂಡಲೇ ಕಂದಾಯ ವಸೂಲಾತಿ ಮಾಡುವಂತೆ ತಿಳಿಸಿದರು.
ಇದಕ್ಕೆ ಸರ್ವ ಸದಸ್ಯರು ಒತ್ತಾಯ ಮಾಡಿದಾಗ ಪಿ.ಡಿ.ಓ. ಚಂದ್ರಮೌಳಿ ಮಾತನಾಡಿ ಕೂಡಲೇ ಈ ಬಗ್ಗೆ ಕಂದಾಯ ಅದಾಲತ್ ಮಾಡಿ ಸ್ಥಳದಲ್ಲೇ ಹಣ ವಸೂಲಾತಿ ಮಾಡುವ ನಿಟ್ಟನಲ್ಲಿ ಕ್ರಮಕೈಗೊಳ್ಳಲಾಗುವದು, ಕಂದಾಯ ಸಂದಾಯ ಮಾಡು ವದಿಲ್ಲವೊ ಅವರಿಗೆ ಕೆಲವು ಸಮಯ ನೀಡಿ ಅದಕ್ಕೂ ಮಾನ್ಯತೆ ನೀಡದಿದ್ದರೆ ಅಂತÀಹವರ ಪರವಾನಿಗೆ ರದ್ದು ಮಾಡುವದಾಗಿ ಹೇಳಿದರು.
ಈ ಹಿಂದೆ ಇದ್ದ ಪಿ.ಡಿ.ಓ. ಸರಿಯಾಗಿ ಸಮಾನ್ಯ ಸಭೆಯ ನಡಾವಳಿಯನ್ನು ನಮೂದಿಸದೆ, ಅಸಂಬದ್ಧ ಮಾಹಿತಿಯನ್ನು ನೀಡಿದರ ವಿರುದ್ಧ ಸದಸ್ಯರು ಹಾಗೂ ಅಧ್ಯಕ್ಷರು ಖಂಡನೆ ವ್ಯಕ್ತಪಡಿಸಿ ಈಗ ನೂತನವಾಗಿ ಅಧಿಕಾರ ವಹಿಸಿಕೊಂಡಿ ರುವ ಪಿ.ಡಿ.ಓ. ಇದನ್ನು ಮುಂದಿನ ಸಭೆಯ ಒಳಗೆ ಸರಿಪಡಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಕಳೆದ ಅವಧಿಯಲ್ಲಿ ಹಸಿ ಮೀನು ಮಾರುಕಟ್ಟೆ 21 ಲಕ್ಷಕ್ಕೆ ಟೆಂಡರ್ ಆಗಿದ್ದು ಈ ವರ್ಷ ಚುನಾವಣೆಗೂ ಮೊದಲು ಇದ್ದ ಆಡಳಿತಾಧಿಕಾರಿಗಳು ಹಾಗೂ ಕಾರ್ಯನಿರ್ವಹಣಾ
(ಮೊದಲ ಪುಟದಿಂದ) ಅಧಿಕಾರಿಗಳು ಪಂಚಾಯತಿಯ ಅಭಿವೃದ್ಧಿಯನ್ನು ಚಿಂತಿಸದೆ ಪಟ್ಟಣದ ಹೊರಭಾಗದಲ್ಲಿ ರುವ ಮೀನು ಮಳಿಗೆಗೆ ಪರವಾನಿಗೆ ನೀಡಿದ್ದು ಅವೈಜ್ಞಾನಿಕವಾಗಿದ್ದು ಅದನ್ನು ಕೂಡಲೇ ತೆರವುಗೊಳಿ ಸುವಂತೆ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಮನವಿ ಮಾಡುವಂತೆ ನಿರ್ದಾರಿಸ ಲಾಯಿತು. ತೀವ್ರ ಚರ್ಚೆಗೆ ಗ್ರಾಸವಾದ ತಾತ್ಕಾಲಿಕ ಸಾರ್ವಜನಿಕ ಬಸ್ಸು ತಂಗುದಾಣದ ಸ್ಥಳ ಗುರುತಿಸುವಿಕೆಯ ವಿಚಾರದಲ್ಲಿ ಸದ್ಯಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಕ್ರಿಯಿಸಿದ ಪಿ.ಡಿ.ಓ. ಪಟ್ಟಣದಲ್ಲಿ ತಾತ್ಕಾಲಿಕ ಬಸ್ಸು ತಂಗುದಾಣ ಆದಷ್ಟು ಬೇಗ ನಿರ್ಮಾಣವಾಗಬೇಕ್ಕಾಗಿದ್ದು, ಇದಕ್ಕಾಗಿ ಇಂಜಿನಿಯರ್ ಮುಖಾಂತರ ತಾಂತ್ರಿಕವಾಗಿ ನೀಲಿ ನಕಾಶೆ ಮಾಡಿಸಲಾಗುವದು ಅವರು ಎಲ್ಲಿ ಸ್ಥಳ ನಿಗದಿ ಮಾಡುತ್ತಾರೋ ಆ ಸ್ಥಳವನ್ನು ಎಲ್ಲ ಸದಸ್ಯರ ಅಭಿಪ್ರಾಯದಂತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲು ಎಲ್ಲರ ಸಹಕಾರ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದÀ ಸದಸ್ಯ ಬಿ.ಎನ್. ಪ್ರಕಾಶ್ ಸರಕಾರದಿಂದ ಈಗಾಗಲೇ ಪಟ್ಟಣಕ್ಕೆ ಒಂದು ಹೈಟೆಕ್ ಬಸ್ಸು ತಂಗುದಾಣದ ವ್ಯವಸ್ಥೆಗೆ ಕಾರ್ಯಕ್ರಮ ರೂಪಿಸಿದ್ದು, ಈಗ ನಿರ್ಮಾಣ ಮಾಡುವ ತಾತ್ಕಾಲಿಕ ತಂಗುದಾಣವನ್ನು ಮರುಬಳಕೆ ಮಾಡುವ ದಿಸೆಯಲ್ಲಿ ಸ್ಥಳವನ್ನು ಗುರುತಿಸಿದರೆ ಹಣ ಪೋಲಾಗುವದನ್ನು ತಡೆ ಹಿಡಿದಂತ್ತಾಗುತ್ತದೆ. ಈ ನಿಟ್ಟನಲ್ಲಿ ಚಿಂತಿಸುವಂತೆ ಸಲಹೆ ನೀಡಿದರು. ಗುಮಾಸ್ತೆಯಾಗಿ ನಿವೃತ್ತಿ ಹೊಂದಿದ ರಂಗನಾಯಕಿ ಪಂಚಾಯಿತಿಯಲ್ಲಿ ಕಳೆದ 2 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದುದ್ದನ್ನು ಬಿ.ಜೆ.ಪಿ. ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಗೋಣಿಕೊಪ್ಪಲು ಪಂಚಾಯಿತಿ ಯ ಸರ್ವಾಂಗೀಣ ಅಭಿವೃದ್ಧಿಗೆ ಅಧ್ಯಕ್ಷರು ಮತ್ತು ಸದಸ್ಯರು ಒಮ್ಮತದಿಂದ ನಿರ್ಧಾರ ಕೈಗೊಳ್ಳು ವಂತೆ ಸಭೆಯಲ್ಲಿ ತೀರ್ಮಾನಿಸ ಲಾಯಿತ್ತು. ಸಭೆಯಲ್ಲಿ ಅಧ್ಯಕ್ಷೆ ಸೆಲ್ವಿ, ಉಪಾಧ್ಯಕ್ಷೆ ಸಿ.ಎಸ್. ಕಾವ್ಯ ಹಾಗೂ ಸರ್ವ ಸದಸ್ಯರು ಹಾಜರಿದ್ದರು.