ಮಡಿಕೇರಿ, ಡಿ.5 : ತಾವು ಕಪ್ಪುಹಣ ದಂಧೆಯಲ್ಲಿ ತೊಡಗಿಲ್ಲ ವೆಂದು ಸ್ಪಷ್ಟಪಡಿಸಿರುವ ಸೋಮವಾರಪೇಟೆ ತಾಲೂಕು ಪಂಚಾಯ್ತಿ ಸದಸ್ಯ ಬಿ.ಎಸ್. ಅನಂತಕುಮಾರ್ ಇತ್ತೀಚೆಗೆ ರೆಸಾರ್ಟ್‍ವೊಂದರಲ್ಲಿ ತಮಗೆ ಸೇರಿದ 35.46 ಲಕ್ಷ ಮೊತ್ತದ ಹಣವನ್ನು ಪೊಲೀಸರು ವಶಪಡಿಸಿಕೊಂಡ ಪ್ರಕರಣವನ್ನು ಕೆಲವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತÀನಾಡಿದ ಅವರು, ಆದಾಯ ತೆರಿಗೆ ಇಲಾಖೆ ಈ ಹಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಒಳಗಾಗಿ ದಾಖಲೆ ನೀಡಲು ತಿಳಿಸಿದ್ದು, ಇದನ್ನು ಒಪ್ಪಿಸಲು ಸಿದ್ಧವಿರುವದಾಗಿ ಸ್ಪಷ್ಟಪಡಿಸಿದರು. ನೂತನ ಮನೆ ನಿರ್ಮಾಣಕ್ಕಾಗಿ ಮೈಸೂರಿನಿಂದ ಸಾಮಗ್ರಿಗಳನ್ನು ಕೊಳ್ಳಲು ಈ ಹಿಂದೆಯೆ ತಾನು ಸಾಲವನ್ನು ಬ್ಯಾಂಕಿನಿಂದ ಪಡೆದಿದ್ದು, ತನಗೆ ಪರಿಚಯವಿರುವ ತೋಟದ ಮಾಲೀಕರುಗಳ ಬೇಡಿಕೆಯಂತೆ ಅವರಲ್ಲಿದ್ದ 2000 ರೂ. ಮುಖಬೆಲೆಯ ನೋಟುಗಳನ್ನು ಪಡೆದು ತನ್ನಲ್ಲಿದ್ದ 100 ರೂ. ಮುಖ ಬೆಲೆಯ ನೋಟುಗಳನ್ನು ಅವರಿಗೆ ನೀಡಿದ್ದೇನೆ. ಈ ಹಿನ್ನೆಲೆಯಲ್ಲಿ ತನ್ನ ಬಳಿ ದೊಡ್ಡ ಮೊತ್ತದ ನೂತನ ನೋಟುಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಗ್ರಹವಾಗಿತ್ತೆಂದು ಸ್ಪಷ್ಟೀಕರಣ ನೀಡಿದರು.

ಕೆಲವರು ಈ ಪ್ರಕರಣವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದು, ತನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಈಗಾಗಲೆ ಪ್ರಕರಣ ವಿಚಾರಣೆಯ ಹಂತದಲ್ಲಿದ್ದು, ಅದಕ್ಕೆ ಸಹಕರಿಸುವದಾಗಿ ತಿಳಿಸಿದರು.

ತಾನು ಸರಕಾರಕ್ಕೆ ತೆರಿಗೆ ಪಾವತಿದಾರನಾಗಿದ್ದು, 5 ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿರುವ ಬಗ್ಗೆ ಚುನಾವಣೆÉ ಸಂದರ್ಭ ಘೋಷಿಸಿ ಕೊಂಡಿರುವದಾಗಿ ಅನಂತಕುಮಾರ್ ಸ್ಪಷ್ಟಪಡಿಸಿದರು. ನನ್ನಿಂದ ಕಪ್ಪುಹಣ ವಿನಿಮಯವಾಗಿದ್ದಲ್ಲಿ ಐನೂರು ಅಥವಾ ಸಾವಿರ ಮುಖಬೆಲೆಯ ನೋಟುಗಳು ಪತ್ತೆಯಾಗಬೆÉೀಕಿತ್ತೆಂದು ಸಮರ್ಥಿಸಿಕೊಂಡಿದ್ದಾರೆ.