ಮಡಿಕೇರಿ, ನ. 1: ರಾಷ್ಟ್ರೀಯ ಸ್ಥಾನಮಾನ ಪಡೆದಿರುವ, 8 ಜ್ಞಾನ ಪೀಠ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿರುವ ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಕರೆ ನೀಡಿದರು.ಕೊಡಗು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ವಿಶ್ವವನ್ನೇ ಬೆರಗುಗೊಳಿಸುವ ಭವ್ಯ ಗೊಮ್ಮಟೇಶ್ವರ, ಬೇಲೂರಿನ ಶಿಲ್ಪಕಲೆ, ಬಾದಾಮಿಯ ಗುಹಾಂತರ ದೇವಾಲಯ, ಪಟ್ಟದಕಲ್ಲು, ಐಹೊಳೆ, ಹಳೇಬೀಡು, ಸೋಮನಾಥಪುರ, ಶೃಂಗೇರಿ, ಹಂಪೆಗಳಲ್ಲಿರುವ ಗುಡಿಗಳು, ಗುಲ್ಬರ್ಗಾ, ಬೀದರ್, ಬಿಜಾಪುರ ಗಳಲ್ಲಿರುವ ಮುಸ್ಲಿಂ ಕಲಾಕೃತಿಗಳು, ಬಹು ಸಂಸ್ಕøತಿಯ ಹಾಗೂ ಸಾಮರಸ್ಯದ ಕುರುಹು ಗಳಾಗಿದೆ. ಕರ್ನಾಟಕದ ಸಂಗೀತವನ್ನು ಪ್ರಪಂಚಕ್ಕೆ ನೀಡಿದ ಪುಣ್ಯಭೂಮಿ ಇದು. ಯಕ್ಷಗಾನ, ನೃತ್ಯ, ನಾಟಕಗಳಲ್ಲಿಯೂ ಕರ್ನಾಟಕ ತನ್ನ ಕೊಡುಗೆಯನ್ನು ನೀಡಿದೆ. 16ನೇ ಶತಮಾನದವರೆಗಿನ ಕರ್ನಾಟಕದ ಇತಿಹಾಸ ರೋಮಾಂಚನಕಾರಿ ಹಾಗೂ ಸಾಹಸ ಕಥೆಗಳ ಸರಣಿ ಎಂದೇ ಹೇಳಬಹುದು. ವೀರ ಅರಸರುಗಳ ನಾಡಾಗಿ ಜಗತ್ತಿನಲ್ಲೇ ಪ್ರಖ್ಯಾತವಾಗಿದೆ ಎಂದು ಸಚಿವ ಸೀತಾರಾಂ ಹೇಳಿದರು.

ಪ್ರತಿ ಮನೆ - ಮನೆಯಲ್ಲೂ, ಶಾಲಾ - ಕಾಲೇಜುಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕ್ರಮಬದ್ಧವಾಗಿ ಓದುವ, ಬರೆಯುವ ಕೌಶಲ್ಯ ಕಲಿಸಬೇಕು. ಕನ್ನಡ ಕುರಿತ ಕಾಳಜಿ, ಕಳಕಳಿ ಎಲ್ಲೆಡೆ ಎಲ್ಲರಲ್ಲೂ ನಿರಂತರವಾಗಿ ಜಾಗೃತವಾಗಿರಬೇಕು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ನಂತರ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಹಸಿವು ಮುಕ್ತ ಕರ್ನಾಟಕ ಎಂಬ ಧ್ಯೇಯದೊಂದಿಗೆ ಪ್ರಾರಂಭಗೊಂಡ ಅನ್ನಭಾಗ್ಯ ಯೋಜನೆಯಲ್ಲಿ ಅಂತ್ಯೋದಯ ಪಡಿತರ ಕುಟುಂಬಕ್ಕೆ ಒಟ್ಟು 35 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿಯ ಪ್ರತಿ ಯೂನಿಟ್ ಸದಸ್ಯರಿಗೆ 5 ಕೆ.ಜಿ. ಉಚಿತ ಅಕ್ಕಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 91746 ಕುಟುಂಬಗಳು ಈ ಯೋಜನೆಯ ಸದುಪ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಪ್ರತೀ ಎಎವೈ, ಬಿಪಿಎಲ್ ಪಡಿತರ ಚೀಟಿಗೆ 1 ಲೀಟರ್ ಪಾಮ್ ಆಯಿಲ್ ರೂ. 25 ರಂತೆ ಹಾಗೂ 1 ಕೆ.ಜಿ. ಉಪ್ಪು ರೂ 2 ರಂತೆ ವಿತರಿಸಲಾಗುತ್ತಿದೆ. ಪ್ರತೀ ಪಟ್ಟಣ, ಗ್ರಾಮಾಂತರ ಪ್ರದೇಶದ ಬಿಪಿಎಲ್ ಹಾಗೂ ಎಎವೈ ಅನಿಲ ರಹಿತ ಪಡಿತರ ಚೀಟಿದಾರರಿಗೆ 3 ಲೀಟರ್‍ನಂತೆ ಪ್ರತಿ ಲೀಟರ್‍ಗೆ ರೂ. 20 ರಂತೆ ಸೀಮೆಎಣ್ಣೆ ವಿತರಿಸಲಾಗುತ್ತಿದೆ ಹಾಗೂ ಗ್ರಾಮಾಂತರ ಎಪಿಎಲ್ ಅನಿಲ ರಹಿತ ಪಡಿತರ ಚೀಟಿದಾರರಿಗೆ 2 ಲೀ.ನಂತೆ ವಿತರಿಸಲಾಗುತ್ತಿದೆ.

ಸಾರ್ವಜನಿಕರಿಗೆ ತುರ್ತು ಆರೋಗ್ಯ ಸೇವೆ ನೀಡುವ ಉದ್ದೇ&divlusmn; Àದಿಂದ ಆರಂಭಿಸಲಾದ ಆರೋಗ್ಯ ಕವಚ ನಗು - ಮಗು ಕಾರ್ಯ ಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನ ಗೊಳಿಸಲಾಗಿದೆ.