*ಗೋಣಿಕೊಪ್ಪಲು, ನ. 8 : ತಾ. 28ರಂದು ನಡೆಯುವ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಅಧಿಕಾರಿ ಮಟ್ಟದ ಸಭೆ ಶಾಸಕ.ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.ಪೊನ್ನಂಪೇಟೆ ತಾ.ಪಂ ಸಾಮಥ್ರ್ಯ ಸಭಾಂಗಣದಲ್ಲಿ ಸಮ್ಮೇಳ ನದ ಪೂರ್ವಭಾವಿ ತಯಾರಿಯ ಬಗ್ಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೆಂಗಡ ಮಧೂಶ್ ಪೂವಯ್ಯ ಮಾಹಿತಿ ನೀಡಿದರು.ಸಮ್ಮೇಳನಕ್ಕೆ ಸುಮಾರು 9 ಲಕ್ಷ ವೆಚ್ಚ ತಗುಲಲಿದೆ. ಸರಕಾರದಿಂದ 1 ಲಕ್ಷ ಅನುದಾನ ಮಾತ್ರ ದೊರಕಲಿದ್ದು, ಉಳಿದ ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಬೇಕಾಗಿದೆ ಎಂದರು.
ಸಮ್ಮೇಳನಕ್ಕೆ ವೀರಾಜಪೇಟೆ ಪಟ್ಟಣದಲ್ಲಿ ನಾಲ್ಕು ದ್ವಾರಗಳನ್ನು ನಿರ್ಮಿಸಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರನ್ನು ಇಡಲಾಗು ವದು. ಮತ್ತು ವೇದಿಕೆಯ ಮುಂಭಾಗದ ಸಭಾಂಗಣಕ್ಕೆ ಸಾಹಿತಿ ರಘುನಾಥ್ ನಾಯಕ್ ಅವರ ಹೆಸರನ್ನು ಇಡಲಾಗುವದು ಎಂದು ತಿಳಿಸಿದರು.
ಡೊಳ್ಳು ಕುಣಿತ ಕಂಸಾಳೆ, ಕೊಡವ ವಾಲಗ ಸೇರಿದಂತೆ ಕಲಾಕೃತಿಗಳನ್ನು ಹೊತ್ತು ಮೆರವಣಿಗೆ ನಡೆಯಲಿದೆ.
ಉದ್ಘಾಟನೆ, ದ್ವಜಾರೋಹಣ, ವಿಚಾರ ಗೋಷ್ಠಿ, ಕವಿಗೋಷ್ಠಿ, ಗೀತಾಗಾಯನ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ, ಸುಮಿತಾ ಗಣೇಶ್, ಅರುವತ್ತೋಕ್ಲು ಗ್ರಾ.ಪಂ ಅಧ್ಯಕ್ಷ ಸುಗುಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಚಮ್ಮಟಿರ ಪ್ರವೀಣ್, ಸಹಕಾರ್ಯ ದರ್ಶಿ ರೇಖಾ ಶ್ರೀಧರ್, ಮಾಧ್ಯಮ ಕಾರ್ಯದರ್ಶಿ ಜಗದೀಶ್ ಜೋಡು ಬೀಟಿ, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕಿರಣ ಪಡ್ನೇಕರ್, ತಾಲೂಕು ಫೆಡರೇಶನ್ ಉಪಾಧ್ಯಕ್ಷ ಮಲ್ಲೆಂಗಡ ಮಧು ದೇವಯ್ಯ ಹಾಗೂ ತಾಲೂಕಿನ ಅಧಿಕಾರಿಗಳು ಹಾಜರಿದ್ದರು.