ವೀರಾಜಪೇಟೆ, ನ. 2: ಕೊಡಗು ಕೇರಳ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆಯಾಗಬೇಕು. ಅನ್ಯ ಭಾಷಿಗರು ನೆಲೆಸಿರುವ ಗಡಿ ಭಾಗವಾದ ವೀರಾಜಪೇಟೆಯಲ್ಲಿ ಕನ್ನಡ ಭಾಷೆಯನ್ನು ಇತರರು ಕಲಿಯುವಂತೆ ಅರಿವು ಮೂಡಿಸಬೇಕು ಇದರಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಇಲ್ಲಿನ ಆಟೋ ಚಾಲಕರ ಮಾಲೀಕರ ಸಂಘದಿಂದ ಇಲ್ಲಿನ ಕಾರು ನಿಲ್ದಾಣದ ಮುಲ್ಲೇರ ಜಿಮ್ಮಿ ಅಯ್ಯಪ್ಪ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆ.ಜಿ.ಬೋಪಯ್ಯ ಅವರು ಇಂಗ್ಲೀಷ್ ಭಾಷೆ ಅನಿವಾರ್ಯವಾದರೂ ಕನ್ನಡ ನೆಲದಲ್ಲಿ ಕನ್ನಡ ಸಾಹಿತ್ಯ, ಭಾಷೆಗೆ ಅಗ್ರ ಸ್ಥಾನ ದೊರೆಯಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಆಟೋ ಚಾಲಕರು, ಮಾಲೀಕರು ಕನ್ನಡದ ಬಗ್ಗೆ ವಹಿಸಿರುವ ಕಾಳಜಿ ಪ್ರತಿಯೊಬ್ಬರಲ್ಲೂ ಮೂಡಿ ಬರಬೇಕು. ಇಂತಹ ಕನ್ನಡ ಪರ ಸಂಘಟನೆಗಳನ್ನು ಸಾಹಿತ್ ಪರಿಷತ್ ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಜನತಾದಳ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಆಟೋ ಚಾಲಕರು ಪ್ರಯಾಣಿಕರಿಗೆ ಸುರಕ್ಷತೆ ನೀಡುವದರೊಂದಿಗೆ ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಯೊಂದಿಗೆ ಸಮಾಜ ಸೇವೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.
ಸಭೆಯನ್ನುದ್ದೇಶಿಸಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಮೂಕೊಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎನ್.ವಿಶ್ವನಾಥ್, ಗೌಡ ಸಮಾಜದ ಉಪಾಧ್ಯಕ್ಷ ಹಾಗೂ ಸಂಘದ ಗೌರವ ಅಧ್ಯಕ್ಷ ಚೆಟ್ಟೆನೆರವಂಡ ಪಿ. ಚಂದ್ರಶೇಖರ್ ಮಾತನಾಡಿದರು. ಬಿ.ಜೆ.ಪಿಯ ಎ.ಅನಿಲ್, ಉದ್ಯಮಿ ಅಟ್ರಂಗಡ ಅಂಜನ್, ಕಾಂಗ್ರೆಸ್ ಪಕ್ಷದ ಜಿ.ಜಿ.ಮೋಹನ್, ಕೆ.ಚಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್.ಎನ್.ಶಿವು ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಹಿರಿಯ ವಕೀ¯ರಾದ ಮೇರಿಯಂಡ ಪೂವಯ್ಯ, ಅಪ್ಪನೆರವಂಡ ಜೋಯಪ್ಪ, ಬೇಬಿ ಚಿಣ್ಣಪ್ಪ, ಚಿತ್ರ ಕಲಾವಿದ ಬಿ.ಆರ್.ಸತೀಶ್ ಇವರುಗಳನ್ನು ಸನ್ಮಾನಿಸಲಾಯಿತು. ಸಂಘದ ಸಲಹೆಗಾರರಾದ ದಾಮೋದರ್ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ಸಮಾರಂಭದ ನಂತರ ಕಾಮಧೇನು ಕ್ರಿಯೇಷನ್ ತಂಡದವರಿಂದ ಸಂಗೀತ ರಸ ಮಂಜರಿ ಕಾಂiÀರ್iಕ್ರಮ ಏರ್ಪಡಿಸ ಲಾಗಿತ್ತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ 9-30 ಗಂಟೆಗೆ ಪಟ್ಟಣ ಪಂಚಾಯಿತಿ ಸದಸ್ಯ ಪಾಂಡಂಡ ರಚನ್ ಮೇದಪ್ಪ ಧ್ವಜಾರೋಹಣ ಮಾಡಿದರು.
ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಪಟ್ರಪಂಡ ರಮೇಶ್ ಕರುಂಬಯ್ಯ ಮೆರವಣಿಗೆಯನ್ನು ಉದ್ಘಾಟಿಸಿದರು. ಮೆರವಣಿಗೆ ನಂತರ ಮುಖ್ಯ ಬೀದಿಗಳಲ್ಲಿ ಚಂಡೆ ವಾದ್ಯದೊಂದಿಗೆ ಕನ್ನಡಾಂಬೆಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.