ಕುಶಾಲನಗರ, ಜ. 10: ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು. ಎದುರ್ಕಳ ಶಂಕರನಾರಾಯಣ ಭಟ್ ಪ್ರಧಾನ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿಕಲಾವಿದರು ಹಾಗೂ ಹಿರಿಯ ಪತ್ರಕರ್ತರಾದ ಜಿ.ಚಿದ್ವಿಲಾಸ್ ಅವರು ಗಾಯನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಾಯಕರುಗಳಾದ ತನ್ವೀರ್ ರಾಜಾ, ಸಂವೇದಿತಾ, ರೇಖಾ ಶ್ರೀಧರ್, ಸತೀಶ್, ಬಿ.ಎಸ್.ಪರಮೇಶ್, ರವಿ, ಬಸವರಾಜ್ ಬಡಿಗೇರ್, ಭರಮಣ್ಣ, ಸತೀಶ್, ರಾಜು, ನಂಜುಂಡಸ್ವಾಮಿ, ಸುಮಿ ಸುಬ್ಬಯ್ಯ ಅವರುಗಳು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಂತರ ನಡೆದ ಮಹಿಳಾ ಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ರೇವತಿ ಪೂವಯ್ಯ ವಹಿಸಿದ್ದರು. ಸೋಮವಾರಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಬಾರ ಪ್ರಾಂಶುಪಾಲರಾದ ತಿಲೋತ್ತಮೆ ಅವರು ಸಾಹಿತ್ಯ ಮತ್ತು ಲಿಂಗ ತಾರತಮ್ಯದ ಬಗ್ಗೆ ವಿಷಯ ಮಂಡಿಸಿದರು. ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕಾವೇರಿ ಪ್ರಕಾಶ್ ಕೌಟುಂಬಿಕ ನಿರ್ವಹಣೆ ಮತ್ತು ಮಹಿಳಾ ಸಾಹಿತ್ಯದ ಬಗ್ಗೆ ವಿಷಯ ಮಂಡಿಸಿದರು. ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಬಿ.ಬಿ.ಸಾವಿತ್ರ, ಸಾಹಿತಿ ಸಹನಾ ಕಾಂತಬೈಲು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಂತರ ನಡೆಯಬೇಕಾಗಿದ್ದ ಕೊಡವ ಅರಿವೋಲೆ ನಿಘಂಟು ಬಿಡುಗಡೆ ಕಾರ್ಯಕ್ರಮ ಕಾರಣಾಂತರಗಳಿಂದ ರದ್ದುಗೊಂಡಿತು.
ಮಾಧ್ಯಮ ಗೋಷ್ಠಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಮಹಬಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆದು ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಬಾನುಲಿ ಮಾಧ್ಯಮದ ಮುಂದಿರುವ ಸವಾಲುಗಳ ವಿಷಯದ ಬಗ್ಗೆ ಮಾತನಾಡಿದರು. ತಡವಾಗಿ ಕಾರ್ಯಕ್ರಮ ಪ್ರಾರಂಭಗೊಂಡಿದ್ದಲ್ಲದೆ ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಾಗಿದ್ದ ಕೊಡಗು ಮೈಸೂರು ಸಂಸದ ಪ್ರತಾಪ್‍ಸಿಂಹ ಅವರ ಗೈರು ಹಾಜರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರುಗಳಾದ ಐತಿಚಂಡ ರಮೇಶ್ ಉತ್ತಪ್ಪ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವಿಷಯ ಮಂಡಿಸಿದರೆ, ಅನಿಲ್ ಹೆಚ್.ಟಿ.ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಗೆ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದರು. ಜೀವನದಿ ಕಾವೇರಿ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ವಿಷಯದಡಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ನದಿ ಸಂರಕ್ಷಣೆ ಮತ್ತು ಕಲುಷಿಕೆ ಬಗ್ಗೆ ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖ ಪತ್ರಕರ್ತರ ಗೈರು ಹಾಜರಿ ಎದ್ದು ಕಂಡುಬಂತು.
ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಬಿ.ಎ.ಜೀವಿಜಯ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಸೋಮವಾರಪೇಟೆ ತಾಲೂಕು ಪಂಚಾಯ್ತಿ ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್, ಕನ್ನಡಪರ ಸಂಘಟನೆಗಳ ಅಧ್ಯಕ್ಷರಾದ ಬಬೀಂದ್ರಪ್ರಸಾದ್, ವೆಂಕಟೇಶ್ ಪೂಜಾರಿ, ಎಂ.ಕೃಷ್ಣ, ಮುರಳಿ, ಸಹದೇವ, ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷ ಸಜಿ, ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಮಹೇಶ್ ಮತ್ತಿತರರು ಇದ್ದರು. ವಿವಿಧ ತಂಡಗಳಿಂದ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿತು.
ಇಂದಿನ ಕಾರ್ಯಕ್ರಮ: ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಬೆಳಗ್ಗೆ 10 ಗಂಟೆಯಿಂದ ಮಕ್ಕಳಗೋಷ್ಠಿ, ಭಾಷೆ ಮತ್ತು ಬದುಕು, ಕನ್ನಡ ಗೀತಗಾಯನ, ಶೈಕ್ಷಣಿಕ ಗೋಷ್ಠಿ, ಕವಿಗೋಷ್ಠಿ ನಡೆಯಲಿದೆ.
ನಂತರ ನಡೆಯಲಿರುವ ಬಹಿರಂಗ ಅಧಿವೇಶನ ಸಂಜೆ 4.30 ಕ್ಕೆ ನಡೆಯಲಿದೆ. 5 ಗಂಟೆಗೆ ಸಾಧಕರಿಗೆ ಸನ್ಮಾನ ನಂತರ ಸಮಾರೋಪ ಸಮಾರಂಭ, ತದನಂತರ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನಕ್ಕೆ ತೆರೆ ಬೀಳಲಿದೆ.