*ಸಿದ್ದಾಪುರ, ಆ. 2: ವೀರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ರಾಜ್ಯ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ಸಂಸ್ಥೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣ, ಸೋಮವಾರಪೇಟೆ ತಾಲೂಕು ಸಂಘಟನಾ ಕಾರ್ಯದರ್ಶಿ ಪಿ.ಜೆ.ಗಣೇಶ್ ಕುಮಾರ್ ಭೇಟಿ ನೀಡಿ, ದೌರ್ಜನ್ಯಕ್ಕೊಳಗಾದ ಗ್ರಾಮ ಪಂಚಾಯಿತಿ ಅದ್ಯಕ್ಷೆ ವೈ. ಈಶ್ವರಿಯ ಬಗ್ಗೆ ವಿಚಾರಿಸಿರು.
ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಗ್ಗೆ ಪತ್ರಿಕಾ ವರದಿಯಿಂದ ತಿಳಿದು ಸತ್ಯಾಂಶಗಳ ಮಾಹಿತಿಗಾಗಿ ಬಂದಿರುವದಾಗಿ ಅವರು ಹೇಳಿದರು.
ಕಳೆದ 10 ತಿಂಗಳಲ್ಲಿ ತನ್ನನ್ನು ಜೀತದಾಳು ಮಾಡಿಕೊಂಡು ಬಂದಿರುವ ಕೆ.ಎಸ್. ಗೋಪಾಲಕೃಷ್ಣ. ತನ್ನೊಂದಿಗೆ ನಡೆದುಕೊಂಡ ರೀತಿ, ನೀಡುತ್ತಿದ್ದ ಕಿರುಕುಳದ ಬಗ್ಗೆ ತನ್ನ ನೋವನ್ನು ಸಂಪೂರ್ಣವಾಗಿ ಹೇಳಿಕೊಂಡು ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಈಶ್ವರಿ ಮನವಿ ಮಾಡಿದರು.
ದೂರನ್ನು ಸ್ವೀಕರಿಸಿಕೊಂಡ, ರಾಜ್ಯ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ಸಂಸ್ಥೆ ಪದಾಧಿಕಾರಿಗಳು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಮಹಿಳೆ ಎಂದ ಮಾತ್ರಕ್ಕೆ ತಮ್ಮ ಬಂಧನ ಗೊಳಪಡಿಸಿದ ಯಾರೇ ಅಗಲಿ ಕಾನೂನು ಕ್ಷಮಿಸುವದಿಲ್ಲ. ಅಧ್ಯಕ್ಷೆ ಈಶ್ವರಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಅವರು ನೀಡಿದ ದೂರನ್ನು ಪಡೆದುಕೊಂಡಿದ್ದೇವೆ. ವರದಿಯನ್ನು ಮುಂದಿನ ಕ್ರಮಕ್ಕೆ ಆಯೋಗಕ್ಕೆ ನೀಡಲಾಗುವದು ಎಂದರು.