ನಾಪೆÇೀಕ್ಲು, ನ. 6: 2015 ನ. 10ರಂದು ಮೊದಲ ಬಾರಿಗೆ ರಾಜ್ಯ ಸರಕಾರದ ಆಯೋಜನೆಯಲ್ಲಿ ನಡೆದ ಟಿಪ್ಪು ಜಯಂತಿಯ ಕಹಿ ಘಟನೆಗಳು ಮಾಸುವ ಮುನ್ನವೇ 2ನೇ ವರ್ಷದ ಟಿಪ್ಪು ಜಯಂತಿಗೆ ಸರಕಾರ ಸಿದ್ಧವಾಗಿದೆ. ತಿಂಗಳುಗಳ ಹಿಂದಿನಿಂದಲೇ ಇದರ ಆಚರಣೆಯಿಂದ ಉಂಟಾಗಬಹುದಾದ ಸಾಧಕ - ಬಾಧಕಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಜಯಂತಿ ಬೇಕು ಎನ್ನುವವರು, ಬೇಡ ಎನ್ನುವವರು, ಪರ - ವಿರೋಧದ ಹೇಳಿಕೆಗಳು, ಆರೋಪ - ಪ್ರತ್ಯಾರೋಪಗಳು, ದ್ವೇಷ, ಹಗೆ ಪರಿಚಿತರು ಪರಸ್ಪರ ಮುಖ ಮರೆಮಾಚಿ ನಡೆದಾಡುವ ಪರಿಸ್ಥಿತಿ ಉಂಟುಮಾಡಿದೆÉ. ಇವೆಲ್ಲದರ ನಡುವೆ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಬದ್ಧ ಎನ್ನುತ್ತಿದೆ. ಇದಕ್ಕೆ ವಿರೋಧ ಪಕ್ಷದ ವಿರೋಧವು ಇದೆ.