ಮಡಿಕೇರಿ, ಆ. 26: ಶಾಲಾ - ಕಾಲೇಜುಗಳೆಂದ ಮೇಲೆ ಅಲ್ಲಿ ನೂರಾರು ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತಕ್ಕ ಸೌಲಭ್ಯಗಳೂ ಇರಬೇಕು. ಕೊಠಡಿ, ಬೋಧಕರು, ಸಭಾಂಗಣ, ಮೈದಾನ ಇವೆಲ್ಲವೂ ಅತ್ಯವಶ್ಯ. ಶಾಲಾವರಣ ಸ್ವಚ್ಛವಾಗಿರಬೇಕು. ಅದರಲ್ಲೂ ಶೌಚಾಲಯವಂತೂ ಬೇಕೇ ಬೇಕು... ಆದರೆ ನಗರದ ಹೃದಯ ಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪರಿಸ್ಥಿತಿ ಮಾತ್ರ ಇವೆಲ್ಲದಕ್ಕೂ ತದ್ವಿರುದ್ಧ ಅಶುಚಿತ್ವದಿಂದ ಕೂಡಿರುವ ಈ ಶಾಲಾ ಆವರಣ ಕಾಲಿಡಲು ಕೂಡ ಹೇಸಿಗೆಯಾಗುತ್ತದೆ. ಕೊಠಡಿಗಳೆಲ್ಲ ಕುಸಿಯುವ ಹಂತದಲ್ಲಿದ್ದು, ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಶೌಚಕ್ಕೋಸ್ಕರ ಇಲ್ಲಿನ ವಿದ್ಯಾರ್ಥಿನಿಯರು ದೂರದ ಬಸ್ ನಿಲ್ದಾಣಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.