ಸೋಮವಾರಪೇಟೆ, ಜೂ. 18: ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸಂಗೀತಾ ದಿನೇಶ್, ಉಪಾಧ್ಯಕ್ಷರಾಗಿ ಚಂದ್ರಿಕಾ ಕುಮಾರ್, ಖಜಾಂಚಿಯಾಗಿ ಲಾವಣ್ಯ ಮೋಹನ್, ಕುವೆಂಪು ಪೂರ್ವ ಪ್ರಾಥಮಿಕ ಶಾಲೆಯ ಕರೆಸ್ಪಾಂಡೆಂಟ್ ಆಗಿ ಕವಿತಾ ವಿರೂಪಾಕ್ಷ ಆಯ್ಕೆಯಾಗಿದ್ದಾರೆ.

ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಪ್ರಥಮ ಸಭೆಯಲ್ಲಿ ವೇದಿಕೆಯ ಆಶ್ರಯದಲ್ಲಿ ನಡೆಯುತ್ತಿರುವ ಶಾಲೆಯ ಕಟ್ಟಡ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿರುವ ಲೋಕೇಶ್ವರಿ ಗೋಪಾಲ್ ಅವರನ್ನು ವೇದಿಕೆಯ ಸದಸ್ಯರು ಸನ್ಮಾನಿಸಿದರು.

ಸದಸ್ಯರುಗಳಿಗೆ ಹೌಸಿಹೌಸಿ, ವೇಗದ ರಾಣಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವೇಗದ ರಾಣಿಯರಾಗಿ ಪ್ರೇಮಾ ಶೇಷಾದ್ರಿ ತಂಡ ಪ್ರಥಮ ಹಾಗೂ ಭಾರತಿ ಜೋಯಪ್ಪ ತಂಡ ದ್ವಿತೀಯ ಸ್ಥಾನಗಳಿಸಿದರು. ಕಾರ್ಯಕ್ರಮದಲ್ಲಿ ವೇದಿಕೆಯ ಮಾಜಿ ಅಧ್ಯಕ್ಷೆ ಗೋಧಾ ಗಣಪತಿ, ಉಪಾಧ್ಯಕ್ಷೆ ಚಂದ್ರ ಬಿದ್ದಪ್ಪ, ಕಾರ್ಯದರ್ಶಿ ಪುಷ್ಪ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.