ಸೋಮವಾರಪೇಟೆ, ಜು. 28: ನೂತನವಾಗಿ ರಚಿಸಲಾದ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸೋಮವಾರಪೇಟೆ ತಾಲೂಕು ಕಚೇರಿಯ ಕಂದಾಯ ವಿಭಾಗದ ಪ್ರಥಮ ದರ್ಜೆ ಸಹಾಯಕರೋರ್ವರು ಬಿದ್ದಿದ್ದಾರೆ. ಭೂಮಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ಸಂದರ್ಭ ಮಡಿಕೇರಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಇಲ್ಲಿನ ತಾಲೂಕು ಕಚೇರಿಯಲ್ಲಿ ಕಳೆದ 3 ವರ್ಷಗಳಿಂದ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಮರಗೋಡು ನಿವಾಸಿ ಪಿ.ಎಸ್. ಪುರುಷೋತ್ತಮ್ ಎಂಬವರೇ ಲಂಚ ಸ್ವೀಕರಿಸಿದ ಆರೋಪದಲ್ಲಿ ಎಸಿಬಿ ಬಲೆಗೆ ಸಿಲುಕಿದವರಾಗಿದ್ದು, ಮಡಿಕೇರಿಯ ಹೊಟೇಲೊಂದರಲ್ಲಿ
ರೂ. 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆದಿದೆ.
ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಹುಜೂರ್ ಜಮಾಬಂದಿ ಸಭೆ ಆಯೋಜನೆಗೊಂಡಿದ್ದು, ತಾಲೂಕು ಕಚೇರಿಯ ಕಂದಾಯ ವಿಭಾಗದ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಭಾಗವಹಿಸಿದ್ದರು.