ಮಡಿಕೇರಿ ಜ. 9: ತಾ. 12 ರಂದು ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಿಶ್ವಾಸ ವ್ಯಕ್ತತಪಡಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಮಡಿಕೇರಿ ತಾಲೂಕಿನ ನಾಲ್ಕು ಸ್ಥಾನ ಹಾಗೂ ಗೋಣಿಕೊಪ್ಪಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಬಲದೆದುರು ಅಭ್ಯರ್ಥಿಗಳೆ ಇಲ್ಲದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪರದಾಡುತ್ತಿದೆ ಎಂದು ಆರೋಪಿಸಿ ದರು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೂಡ ತಾವು ಕಾಂಗ್ರೆಸ್ಸಿಗರೆಂದು ಹೇಳಿಕೊಳ್ಳಲು ಮುಜುಗರ ಪಟ್ಟುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಹೀನಾಯ ಪರಿಸ್ಥಿತಿ ಯಲ್ಲಿದ್ದು, ಶೇ.100 ರಷ್ಟು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಮನು ಮುತ್ತಪ್ಪ ಹೇಳಿದರು.
ನೊಟುಗಳ ಅಮಾನ್ಯೀಕರಣ ಪವಿತ್ರ ಬೆಳವಣಿಗೆಯೆಂದು ಅಭಿಪ್ರಾಯಪಟ್ಟ ಅವರು ಪ್ರಧಾನಿ ನರೇಂದ್ರÀ್ರ ಮೋದಿ ಅವರ ದಿಟ್ಟ ನಡೆಯಿಂದಾಗಿ ದೆÉೀಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದರು. ಶೇ. 60 ರಷ್ಟು ಭಯೋತ್ಪಾದನೆ ಕಡಿಮೆಯಾಗಿದ್ದು, ಕಾಶ್ಮೀರದಲ್ಲಿ ಗಲಭೆ ನಿಯಂತ್ರಣಕ್ಕೆ ಬಂದಿದೆ. ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್, ನೋಟು ಅಮಾನ್ಯೀಕರಣದ ವಿರುದ್ಧ ಪ್ರತಿಭಟನೆ ನಡೆಸಿ ನಗೆಪಾಟಲಿಗೀಡಾ ಗುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ರೂ. ಹಗರಣವಾಗಿದೆಯೆಂದು ಆರೋಪಿಸಿದ ಮನು ಮುತ್ತಪ್ಪ, ಭ್ರಮ ನಿರಸನಗೊಂಡಿರುವ ಕಾಂಗ್ರೆಸ್, ಇಲ್ಲಸಲ್ಲದ ಹೇಳಿಕೆ ನೀಡುತ್ತಿದೆಯೆಂದು ಟೀಕಿಸಿದರು.
ಎಐಸಿಸಿ ಸಂಯೋಜಕಿ ಉಷಾ ನಾಯ್ಡು ಅವರು, ಕೇಂದ್ರದ ವಿರುದ್ಧ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಳೆದ 60 ವರ್ಷಗಳ ಆಡಳಿತದಲ್ಲಿ ದೇಶದ ಜನರನ್ನು ಕಾಂಗ್ರೆಸ್
(ಮೊದಲ ಪುಟದಿಂದ) ಅವಿದ್ಯಾವಂತರನ್ನಾಗಿ ಮಾಡಿದೆ ಯೆಂದು ಅಸಮಾಧಾನ ವ್ಯಕ್ತಪಡಿಸಿ ದರು. ವಿಶ್ವದಲ್ಲಿಯೆ ಅತೀ ಹೆಚ್ಚು ಮೊಬೈಲ್ ಬಳಸುವ ದೇಶ ಭಾರತವಾಗಿದ್ದು, 108 ಕೋಟಿ ಜನರ ಬಳಿ ಮೊಬೈಲ್ ಫೋನ್ ಇದೆ. ಇದು ಡಿಜಿಟಲ್ ವ್ಯವಸ್ಥೆಗೆ ಜನರು ಹೊಂದಿಕೊಳ್ಳುತ್ತಿರುವದಕ್ಕೆ ಸಾಕ್ಷಿ ಯಾಗಿದೆ ಎಂದು ಸಮರ್ಥಿಸಿಕೊಂಡರು.
ಸಂಸÀದ ಪ್ರತಾಪ್ ಸಿಂಹ ಅವರ ಪ್ರಯತ್ನದ ಫಲವಾಗಿ ಜಿಲ್ಲೆಗಳ ರಸ್ತೆ ಅಭಿವೃದ್ಧಿಗೆ 28 ಕೊಟಿ ರೂ. ಬಿಡುಗಡೆಯಾಗಿದೆ. ಸಕಲೆÉೀಶಪುರ, ಕೊಡ್ಲಿಪೇಟೆ, ಮಡಿಕೇರಿ ಹಾಗೂ ವೀರಾಜಪೇಟೆ, ಮಾಕುಟ್ಟ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಾಗುತ್ತಿರುವದು ಸ್ವಾಗತಾರ್ಹವೆಂದರು.
ಅಮ್ಮತ್ತಿಯಲ್ಲಿ ನಿವೃತ್ತ ಸೇನಾಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿರುವದನ್ನು ಖಂಡಿಸಿದ ಮನು ಮುತ್ತಪ್ಪ, ಜ.20 ರಂದು ಮಾಜಿ ಸೈನಿಕರು ನಡೆಸುವ ಪ್ರತಿಭಟನೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ದಿಡ್ಡಳ್ಳಿ ಹೋರಾಟದ ಬಗ್ಗೆ ಪ್ರಸ್ತಾಪಿಸಿದ ಅವರು, ಚಿತ್ರದುರ್ಗ, ಬೆಳಗಾಂ, ತಿಪಟೂರು ಭಾಗದಿಂದ ಆಗಮಿಸಿದ 15 ರಿಂದ 20 ವರ್ಷದ ಯುವ ಸಮೂಹ ಕೂಡ ಪ್ರಚೋದನಕಾರಿಯಾಗಿ ಹೋರಾಟ ನಡೆಸಿದ್ದು, ಕ್ರಾಂತಿ ಗೀತೆಯನ್ನು ಹಾಡÀÀಲಾಗಿದೆ. ಇದನ್ನು ಪೊಲೀಸ್ ಇಲಾಖೆ ಹಾಗೂ ಅಪರಾಧ ಪತ್ತೆದಳ ಗಂಭೀರವಾಗಿ ಪರಿಗಣಿಸಬೇಕು. ದಿಡ್ಡಳ್ಳಿಯಲ್ಲಿರುವ ನೈಜ ಗಿರಿಜನರಿಗೆ ನಿವೇಶನವನ್ನು ಶೀಘ್ರ ಮಂಜೂರು ಮಾಡಬೇಕೆಂದು ಮನು ಮುತ್ತಪ್ಪ ಒತ್ತಾಯಿಸಿದರು.
ಜಿಲ್ಲಾ ವಕ್ತಾರÀ ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ, ಶಾಸಕರುಗಳ ಅಧ್ಯಕ್ಷತೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಇದೆಯಾದರೂ, ಚುನಾಯಿತ ಬಿಜೆಪಿ ಜನಪ್ರತಿನಿಧಿಗಳಿಗೆ ಸರ್ಕಾರ ಸೂಕ್ತ ಗೌರವ ನೀಡದಿರುವದರಿಂದ ಸಮಿತಿ ಸಭೆ ನಡೆಯುತ್ತಿಲ್ಲವೆಂದು ಸಮರ್ಥಿಸಿ ಕೊಂಡರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಮೊಂತಿ ಗಣೇಶ್ ಹಾಗೂ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷÀ ಸತೀಶ್ ಉಪಸ್ಥಿತರಿದ್ದರು.