ಸೋಮವಾರಪೇಟೆ, ಡಿ.28: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚುನಾವಣೆ ನಿಗಧಿಯಾಗಿರುವ ಹಿನ್ನೆಲೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು ಕಸರತ್ತು ತೀವ್ರಗೊಳಿಸಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೆಂಬಲಿತ ಸದಸ್ಯರುಗಳು ತಮ್ಮ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಾರೆ.ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12 ಸ್ಥಾನಗಳಿಗೆ ಜ.12 ರಂದು ಚುನಾವಣೆ ನಡೆಯಲಿದ್ದು, ಈವರೆಗೆ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಜಿ.ಎಸ್. ಕೃಷ್ಣ ತಿಳಿಸಿದ್ದಾರೆ.
ಮಂಗಳವಾರ 16 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಬುಧವಾರ 19 ನಾಮಪತ್ರಗಳು ಸಲ್ಲಿಕೆಯಾಗಿವೆ. ತಾ. 29ರಂದು (ಇಂದು) ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.
ಕೊಡ್ಲಿಪೇಟೆ (ಸಾಮಾನ್ಯ) ಕ್ಷೇತ್ರಕ್ಕೆ ಬುಧವಾರ ಎಚ್.ಎಂ.ಶರತ್ಚಂದ್ರ, ಕೆ.ಎಂ.ಗಣೇಶ್, ಎಸ್.ಡಿ.ತಮ್ಮಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರಸಂತೆ (ಮಹಿಳೆ), ಜಿ.ಎಂ.ಶಿವಮಣಿ, ಬಿ.ಎಂ.ಸರಳಾಮಣಿ, ಗೌಡಳ್ಳಿ (ಬಿಸಿಎಂ(ಎ)) ಜೆ.ಬಿ.ವಿಜಯ, ಬೇಳೂರು (ಸಾಮಾನ್ಯ), ಎಂ.ಟಿ.ದಾಮೋಧರ, ಕಿರಗಂದೂರು (ಮಹಿಳೆ), ಎನ್.ಟಿ.ಕಮಲಾಕ್ಷಿ, ಹಾನಗಲ್ (ಬಿಸಿಎಂ(ಬಿ), ಡಿ.ಡಿ.ಹೊನ್ನಪ್ಪ, ಎಚ್.ಎಚ್.ಈರಪ್ಪ, ಶಾಂತಳ್ಳಿ (sಸಾಮಾನ್ಯ), ಬಿ.ಎಸ್. ಲಿಂಗರಾಜು, ಕೆ.ಕೆ.ಗೋಪಾಲ್, ಕೆ.ಕೆ.ಮುತ್ತಣ್ಣ, ಚೇರಳ-ಶ್ರೀಮಂಗಲ (ಸಾಮಾನ್ಯ), ಕೆ.ಟಿ.ಹರೀಶ್, ಕುಶಾಲನಗರ( ಅನುಸೂಚಿತ ಜಾತಿ), ಎಚ್.ಡಿ. ಚಂದ್ರಾಜು, ಹೆಬ್ಬಾಲೆ (ಅನುಸೂಚಿತ ಪಂಗಡ),
ಕೆ.ಬಿ. ರಾಮಚಂದ್ರ ಹಾಗೂ ವರ್ತಕರ ಕ್ಷೇತ್ರಕ್ಕೆ ಕೆ.ಟಿ.ಭೀಮಯ್ಯ, ಎಚ್.ಎಸ್.ರಘು ನಾಮಪತ್ರ ಸಲ್ಲಿಸಿದ್ದಾರೆ.
ತಾ.30ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 11 ಕ್ಷೇತ್ರಗಳ ಪೈಕಿ 5 ಸಾಮಾನ್ಯ,
(ಮೊದಲ ಪುಟದಿಂದ) ಎರಡು ಮಹಿಳೆ, ತಲಾ ಒಂದು ಸ್ಥಾನಗಳು ಅನುಸೂಚಿತ ಪಂಗಡ, ಅನುಸೂಚಿತ ಜಾತಿ, ಬಿಸಿಎಂ ಎ, ಬಿಸಿಎಂ ಬಿ ಗೆ ಮೀಸಲಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಎರಡು ರಾಷ್ಟ್ರೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ. ಜೆಡಿಎಸ್ ಕೂಡ ಕಾಂಗ್ರೆಸ್ನೊಂದಿಗೆ ಸೇರಿ ಕೆಲ ಸ್ಥಾನಗಳನ್ನು ಗೆದ್ದುಕೊಳ್ಳಲು ಪ್ರಯತ್ನ ನಡೆಸಿದೆ.