ಸೋಮವಾರಪೇಟೆ, ಡಿ. 28: ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ಜ. 12 ರಂದು ನಡೆಯಲಿದ್ದು, 11 ಸ್ಥಾನಗಳಿಗೆ ಒಟ್ಟು 16 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಹಶೀಲ್ದಾರ್ ಜಿ.ಎಸ್. ಕೃಷ್ಣ ತಿಳಿಸಿದ್ದಾರೆ.

ಕೊಡ್ಲಿಪೇಟೆ ಕ್ಷೇತ್ರ (ಸಾಮಾನ್ಯ)ಕ್ಕೆ ಕೆ.ಟಿ. ಹರೀಶ (ಒಂದು ನಾಮಪತ್ರ), ಗೌಡಳ್ಳಿ (ಬಿಸಿಎಂ ಎ.), ಎಂ.ಎಂ. ಶಿವನ್ (1), ಬೇಳೂರು (ಸಾಮಾನ್ಯ), ಎಂ.ಎನ್. ಅಶೋಕ್ (2) ಡಿ.ಎಸ್. ಪೊನ್ನಪ್ಪ (1) ಹಾನಗಲ್ಲು (ಬಿಸಿಎಂ. ಬಿ), ಸಿ.ಎಸ್. ನಾಗರಾಜು (2) ಹರದೂರು (ಸಾಮಾನ್ಯ), ಪೊನ್ನಪ್ಪ, (2), ಬಿ.ಎ. ಮೊಣ್ಣಪ್ಪ (2), ಚೇರಳ ಶ್ರೀಮಂಗಲ (ಸಾಮಾನ್ಯ), ಮಾದಪ್ಪ (2), ಟಿ.ಪಿ. ವಿಜಯ (2), ಕುಶಾಲನಗರ (ಅನುಸೂಚಿತ ಜಾತಿ), ಎಂ.ಡಿ. ರಮೇಶ್, (1), ಕೆ.ಟಿ. ಈರಯ್ಯ (2) ಹೆಬ್ಬಾಲೆ (ಅನುಸೂಚಿತ ಪಂಗಡ) ಚಿಕ್ಕಯ್ಯ (1), ಸಿ.ಕೆ. ಉದಯ ಕುಮಾರ್ (1) ನಾಮಪತ್ರ ಸಲ್ಲಿಸಿದ್ದಾರೆ. ಕಿರಗಂದೂರು (ಮಹಿಳೆ), ಶನಿವಾರಸಂತೆ (ಮಹಿಳೆ), ಶಾಂತಳ್ಳಿ (ಸಾಮಾನ್ಯ), ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಯಾಗಿಲ್ಲ.

ತಾ. 30 ರಂದು (ನಾಳೆ) ನಾಮಪತ್ರ ಪರಿಶೀಲನೆ ನಡೆಯಲಿದೆ. 11 ಕ್ಷೇತ್ರಗಳ ಪೈಕಿ 5 ಸಾಮಾನ್ಯ, ಎರಡು ಮಹಿಳೆ, ತಲಾ ಒಂದು ಸ್ಥಾನಗಳು ಅನುಸೂಚಿತ ಪಂಗಡ, ಅನುಸೂಚಿತ ಜಾತಿ, ಬಿಸಿಎಂಎ, ಬಿಸಿಎಂಬಿ.ಗೆ ಮೀಸಲಾಗಿದೆ.

ಪ್ರಸಕ್ತ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದೆಗೆ ಏರಲು ಎರಡು ರಾಷ್ಟ್ರೀಯ ಪಕ್ಷಗಳು ತಂತ್ರ ರೂಪಿಸುತ್ತಿವೆ. ಜೆಡಿಎಸ್ ಕೂಡ ಕಾಂಗ್ರೆಸ್‍ನೊಂದಿಗೆ ಸೇರಿ ಕೆಲ ಸ್ಥಾನಗಳನ್ನು ಗೆದ್ದುಕೊಳ್ಳಲು ಪ್ರಯತ್ನ ಮುಂದುವರಿಸಿದೆ.