ಗೋಣಿಕೊಪ್ಪಲು, ನ. 18: ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ತಾ. 18ರಂದು ರಂದು ನಡೆದ ವಿಶೇಷ ಶಿಬಿರದ ಪೂರ್ವ ಭಾವಿ ಸಭೆÀಯಲ್ಲಿ ಬಲ್ಯಮಂಡೂರು ಗ್ರಾಮವನ್ನು ಈ ವರ್ಷ ಅಭಿವೃದ್ಧಿ ಚಟುವಟಿಕೆಗಾಗಿ ದತ್ತು ಗ್ರಾಮವಾಗಿ ಪೋಷಿಸಲಾಯಿತು. ಗ್ರಾಮದ ಹಿರಿಯರು, ಶಿಕ್ಷಣ ತಜ್ಞರು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಸೇರಿದ್ದ ಈ ಸಭೆಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ತಾ. 22 ರಿಂದ 28ರ ವರೆಗೆ ನಡೆಸಲು ತೀರ್ಮಾನಿಸಲಾಯಿತು. ಅಲ್ಲದೆ ಗ್ರಾಮದ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಗ್ರಾಮಕ್ಕೆ ಅವಶ್ಯವಿರುವ ಅಭಿವೃಧಿ ಕಾರ್ಯವನ್ನು ಹಮ್ಮಿಕೊಳ್ಳುವದರ ಬಗ್ಗೆ ಚರ್ಚಿಸಲಾಯಿತು. ಎನ್.ಎನ್.ಎಸ್. ನಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಶ್ರಮದಾನ ಮತ್ತಿತರ ಕಾರ್ಯಕ್ರಮ ದೊಂದಿಗೆ ಭಾಷಿಕವಾಗಿ ಗ್ರಾಮ ವೊಂದನ್ನು ದತ್ತು ಪಡೆಯಲಾಗುತ್ತದೆ.
ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾವೇರಿ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎಂ.ಕೆ.ಮೊಣ್ಣಪ್ಪ ಅವರು ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಯುವಜನತೆ ಕೈ ಜೋಡಿಸಿ ಉತ್ತಮ ಗ್ರಾಮ ನಿರ್ಮಾಣದಲ್ಲಿ ತೊಡಗಿಕೊಳ್ಳ ಬೇಕೆಂದು ಅಭಿಪ್ರಾಯ ಪಟ್ಟರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮದ ಸರ್ವ ಜನತೆಯು ಒಪ್ಪಿಗೆ ಸೂಚಿಸಿ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ ಮಾತನಾಡಿ, ದತ್ತು ಗ್ರಾಮಕ್ಕೆ ಕಾಲೇಜಿನಿಂದ ಸಂಪೂರ್ಣ ಸಹಕಾರ ನೀಡುವದಾಗಿ ಭರವಸೆ ಕೊಟ್ಟರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಆಟ್ರಂಗಡ ಪ್ರಕಾಶ್, ಗ್ರಾ.ಪಂ. ಸದಸ್ಯೆ ಎಚ್.ಆರ್. ಇಂದಿರಾ, ಸಿ.ಆರ್.ಪಿ. ತಿರುನೆಲ್ಲಿಮಾಡ ಜೀವನ್, ಮುಖ್ಯ ಶಿಕ್ಷಕಿ ರತ್ನ ಕುಮಾರಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಕಾಂತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪೊನ್ನಪ್ಪ, ಎನ್.ಎಸ್.ಎಸ್. ಯೋಜನಾಧಿಕಾರಿ ಗಳಾದ ಎಂ.ಎನ್.ವನೀತಕುಮಾರ, ಎನ್.ಪಿ.ರೀತ ಹಾಗೂ ಬಲ್ಯ ಮಂಡೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.