ಕೂಡಿಗೆ, ಅ. 22: ವಿದ್ಯಾರ್ಥಿಗಳು ತನಗೂ ಹಾಗೂ ಸಮಾಜಕ್ಕೂ ಪ್ರಯೋಜನ ವಾಗುವಂತಹ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಮಡಿಕೇರಿ ಸರಸ್ವತಿ ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೇಳಿದರು. 7 ದಿನಗಳ ಕಾಲ ನಲ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಭಾಷಣ ಕಾರರಾಗಿ ಅವರು ಮಾತನಾಡಿದರು.
ಕಾಲೇಜಿನ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್, ಕಾಲೇಜಿನ ಪ್ರಾಂಶುಪಾಲ ಎಂ.ಆರ್. ಸುರೇಶ್ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಬಿ. ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕ ಜಂಶತ್ ಅಹಮ್ಮದ್ ಖಾನ್, ಶಿಬಿರಾಧಿಕಾರಿ ಹೆಚ್.ಆರ್. ಶಿವಕುಮಾರ್, ಸಹ ಶಿಬಿರಾಧಿಕಾರಿ ಗಳಾದ ಎಸ್. ಸುಚಿತ್ರ, ವಿನುತ ಉಪಸ್ಥಿತರಿದ್ದರು. 7 ದಿನಗಳ ವಾರ್ಷಿಕ ಶಿಬಿರದಲ್ಲಿ, ಶಾಲೆಯ ಆವರಣದ ಸ್ವಚ್ಛತೆ, ಪರಿಸರ ಜಾಗೃತಿ ಜಾಥಾ, ಇಂಗು ಗುಂಡಿಗಳ ನಿರ್ಮಾಣ, ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಯ ಅರಿವನ್ನು ಮೂಡಿಸುವದು, ನಾಯಕತ್ವದ ಬೆಳವಣಿಗೆ, ಸಾಕ್ಷರತೆಯ ಬಗ್ಗೆ ಅರಿವನ್ನು ಮೂಡಿಸಲಾಯಿತು.