ಗೋಣಿಕೊಪ್ಪಲು, ಅ. 14: ಕಾವೇರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಮಾಯಮುಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಕರಾಟೆ ತೀರ್ಪುಗಾರ ಅರುಣ್ ಮಾಚಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪೃಥ್ವಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಾಳಾಜಿ ಗ್ರಾಮದ ಬೆಳೆಗಾರ ಸಣ್ಣುವಂಡ ಯಂ. ವಿಶ್ವನಾಥ, ಕೊಡಗಿನ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಶಿವಚಾರರ ಎಸ್. ಸುರೇಶ್, ಕಾವೇರಿ ಅಸೋಸಿ ಯೇಷನ್‍ನ ಅಧ್ಯಕ್ಷ ಕಾಳಪಂಡ ಸಿ. ಸುಧೀರ್, ಮಾಯಮುಡಿ ವ್ಯವಸಾಯ ಸಹಕಾರ ಸಂಘದ ಉಪಾಧ್ಯಕ್ಷೆ ಪುಚ್ಚಿಮಾಡ ಶಿಲ್ಪ ಮಾದಪ್ಪ, ಮಾಯಮುಡಿ ಗ್ರಾಮದ ಬೆಳೆಗಾರ ಮಾಚಿಮಾಡ ಸಿ. ದೇವಾನಂದ, ಶಿಕ್ಷಕಿ ರಾಗಿಣಿ, ದೈಹಿಕ ಶಿಕ್ಷಕ ಮಲ್ಲಂಗಡ ಟಿ. ಸತ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್. ಸುಬ್ಬಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಿ ರಾಮು, ಬೆಳೆಗಾರರಾದ ಸಿ.ಜೆ. ವಿಲ್ಸನ್, ಜೆ.ಎಸ್. ಲೋಕೇಶ, ಪಿ.ಎನ್. ವಿಷ್ಣುಮೂರ್ತಿ ಮತ್ತು ಪಂಚು ದೇವಯ್ಯ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಎನ್. ವಿಷ್ಣುಮೂರ್ತಿ ಇದ್ದರು.

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾವೇರಿ ಕಾಲೇಜಿನ ಸಿಬ್ಬಂದಿ ಎಂ.ಎಂ. ಚೆನ್ನನಾಯಕ ಕಾರ್ಯಕ್ರಮವನ್ನು ನಿರೂಪಿಸಿದರೆ, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಸ್ವಾಗತಿಸಿದರು. ಎನ್.ಎಸ್.ಎಸ್. ಅಧಿಕಾರಿ ಎಸ್.ಆರ್. ತಿರುಮಲಯ್ಯ ವಂದಿಸಿದರು.