ಚೆಟ್ಟಳ್ಳಿ, ಡಿ. 21: ಕುಂಜಿಲಗೇರಿ ಗ್ರಾಮದ ಬೊಟ್ಲಪ್ಪ ಬೆಟ್ಟದ ಪಕ್ಕದ ಊರ್ ಚಾಲ್ ಮಂದ್‍ನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕುಂಜಿಲಗೇರಿ ದÉೀವಸ್ಥಾನ ಯೂನಿಯನ್ ಸಂಘದ ಸಂಯುಕ್ತ ಆಶ್ರಯದಲಿದಿತ್ತೀಚೆಗೆ ಪುತ್ತರಿ ಸಾಂಸ್ಕøತಿಕ ನಮ್ಮೆ ನಡೆಯಿತು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ ಎಕ್ಸಿಕ್ಯುಟಿವ್ ಇಂಜಿನಿಯರ್ ಬಟ್ಟಕಾಳಂಡ ಮತ್ತಣ್ಣ ಉದ್ಘಾಟಿಸಿ, ಮಾತನಾಡಿ, ಮಂದ್ ಮಾನಿ ಸಂಸ್ಕøತಿಗೆ ಕೈಲಾಗುವ ಸಹಾಯ ಮಾಡಲು ಸಿದ್ಧನಿದ್ದೇನೆ. ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯವೈಕರಿಯ ಬಗ್ಗೆ ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಿದ್ದಾಟಂಡ ಎಸ್. ತಮ್ಮಯ್ಯ ಮಾತನಾಡಿ, ಕೊಡಗಿನ ಕೆಲವೆಡೆ ಮುಚ್ಚಿಹೋದ ಕೊಡವರ ಪವಿತ್ರ ನೆಲೆಯಾದ ಮಂದನ್ನು ತೆರೆಯಲಾಗಿದೆ. ಅಲ್ಲಿ ಕೊಡವರÀ ಸಂಸ್ಕøತಿಕ ಆಟ್-ಪಾಟ್-ಪಡಿಪು ಕಾರ್ಯಕ್ರಮವನ್ನು ನಡೆಸಿಕೊಂಡು ಬಂದರೆ ಮಾತ್ರ ಅಲ್ಲಿ ಪಾವಿತ್ರ್ಯತೆ ಉಳಿಯಲು ಸಾಧ್ಯ ಎಂದರು.

ಯುಕೋ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಸುಮಾರು 40 ವರ್ಷಗಳ ಹಿಂದೆ ಮುಚ್ಚಿಹೋಗಿದ್ದ ಮಂದನ್ನು ಶ್ರಮಿಸಿ ಕಳೆದ ವರ್ಷ ತೆರೆದಿದ್ದೇವೆ. ಮುಂದೆಯೂ ಉಳಿಸಿ-ಬೆಳೆಸಲು ಎಲ್ಲರು ಕೈಜೋಡಿಸಬೇಕು. ಇಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಎಲ್ಲರು ಸಕ್ರಿಯವಾಗಿ ಶ್ರದ್ಧಾಭಕ್ತಿಯಿಂದ ಭಾಗವಹಿಸಬೇಕೆಂದರು.

ಇಲ್ಲಿನ ಸಂಸ್ಕøತಿಯನ್ನು ಹೊರಗಡೆ ಮೋಜಿಗಾಗಿ ಪ್ರದರ್ಶನ ಮಾಡುವ ಬದಲು ಮೂಲ ಸಂಸ್ಕøತಿಯ ದೇವ ನೆಲೆಯಾದ ಕೊಡಗಿನಲ್ಲಿಯೇ ಆಚರಿಸಿ, ಉಳಿಸಿ-ಬೆಳೆಸುವಲ್ಲಿ ಶ್ರಮಿಸೋಣ ಎಂದು ಕಾಕೋಟುಪರಂಬು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಹೇಳಿದರು.

ಮಖ್ಯ ಅತಿಥಿಗಳಾಗಿ ವೀರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಅಲತಂಡ ಸೀತಮ್ಮ, ದೇವತಕ್ಕ ಮುಂಡಂಡ ಪೂವಪ್ಪ, ದÉೀವಸ್ಥಾನ ಯೂನಿಯನ್ ಅಧ್ಯಕ್ಷ ಚರಮಂಡ ಪೂವಯ್ಯ, ನಿವೃತ್ತ ಎಸ್‍ಪಿ ಮುಕ್ಕಾಟಿರ ಚೋಟು ಅಪ್ಪಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಕುಳಿಯಕಂಡ ಪೊನ್ನಣ್ಣ, ಅಲ್ಲಪ್ಪಿರ ಶ್ವೇತ ನಾಣಯ್ಯ, ಕೂತಂಡ ಬೆಲ್ಲು ಮಂದಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ಕೊಡಗ್‍ರ ಮಂದ್ ಮಾನಿ ಅಂದ್ ಇಂದ್’ ಎಂಬ ವಿಚಾರವಾಗಿ ಮುಕ್ಕಾಟಿರ ಪಿ. ಶಂಭು ವಿಚಾರ ಮಂಡನೆ ಮಾಡಿದರು. ಸ್ವಾಗತವನ್ನು ಚರಮಂಡ ಅಪ್ಪುಣು ಪೂವಣ್ಣ, ವಂದನಾರ್ಪನೆಯನ್ನು ಮುಕ್ಕಾಟಿರ ಚೋಟು ಅಪ್ಪಯ್ಯ ನೆರವೇರಿಸಿದರು.

ಪ್ರತಿಭಾ ಮತ್ತು ತಂಡದಿಂದ ಸ್ವಾಗತ ನೃತ್ಯ, ಸ್ವಾತಿ ಮತ್ತು ತಂಡದಿಂದ ಕೋಲಾಟ್, ಊರಿನವರಿಂದ ಬೊಳಕಾಟ್, ಉಮ್ಮತಾಟ್, ಕೂತಂಡ ಬೆಲ್ಲು ಮಂದಣ್ಣ ತಂಡದಿಂದ ಬೊಳಕಾಟ್, ದೇವರ ಈಡ್, ಪರೆಕಳಿ, ಕರಿಯಣ್ಣ ಮತ್ತು ತಂಡದಿಂದ ಕಾಪಳ ಕಳಿ ಹಾಗೂ ತಾಲಿಪಾಟ್ ಏರ್ಪಡಿಸಲಾಗಿತ್ತು.

- ಕರುಣ್ ಕಾಳಯ್ಯ, ಪಪ್ಪು ತಿಮ್ಮಯ್ಯ