ವೀರಾಜಪೇಟೆ, ಸೆ. 28: ಮನೆಯ ಬಳಿಯಲ್ಲಿ ಉಯ್ಯಾಲೆ ಕಟ್ಟಿಕೊಂಡು ಆಟವಾಡುತ್ತಿದ್ದ ವಿದ್ಯಾರ್ಥಿ ಸುಹೇಲ್ (13) ಎಂಬಾತ ಇಂದು ಸಂಜೆ ಸಾವನ್ನಪ್ಪಿದ್ದಾನೆ.
ಇಲ್ಲಿನ ವಿದ್ಯಾನಗರದಲ್ಲಿರುವÀ ಬ್ರೈಟ್ ಪಬ್ಲಿಕ್ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಸುಹೇಲ್ ಇಂದು ಬೆಳಿಗ್ಗೆ ತರಗತಿಯಲ್ಲಿ ಪರೀಕ್ಷೆ ಮುಗಿಸಿ ಅಪರಾಹ್ನ ಮನೆಗೆ ಬಂದು ಉಯ್ಯಾಲೆ ಆಟ ಆಡುತ್ತಿದ್ದಾಗ ಬಿದ್ದು ಹಣೆ ಭಾಗ ನೆಲಕ್ಕೆ ಬಡಿದು ಗಾಯಗೊಂಡು ಸಾವನ್ನಪ್ಪಿರುವದಾಗಿ ವಿದ್ಯಾರ್ಥಿ ತಂದೆ ಹಾಗೂ ಆಟೋ ಚಾಲಕನಾಗಿರುವ ಶಾಜಿತ್ ದೂರು ನೀಡಿದ್ದಾರೆ.
ವಿದ್ಯಾರ್ಥಿಯ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ತಂದರೂ ವಿದ್ಯಾರ್ಥಿ ಸಣ್ಣ ವಯಸ್ಸಿನೆಂಬ ಕಾರಣಕ್ಕಾಗಿ ಪೋಷಕರು ಮೃತದೇಹವನ್ನು ಹಿಂದಿರುಗಿಸಿ ಮನೆಗೆ ಕೊಂಡೊಯ್ದರು.