ಮಡಿಕೆÉೀರಿ, ಆ. 24 : ಮನೆಯ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಮನನೊಂದು ತಾ. 23 ರಂದು ನೇಣಿಗೆ ಶರಣಾದ ಬೆಟ್ಟಗೇರಿ ಗ್ರಾಮದ ಚಳಿಯಂಡ ಉತ್ತಪ್ಪ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಸ್ಥಳೀಯ ಗ್ರಾಮಸ್ಥರು ಪೆÀÇಲೀಸರಿಗೆ 48 ಗಂಟೆಗಳ ಗಡುವನ್ನು ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಬೆಟ್ಟಗೇರಿ ಗ್ರಾಮದ ಪ್ರಮುಖರಾದ ಸೂದನ ಎಸ್. ಈರಪ್ಪ ಅವರ ನೇತೃತ್ವದಲ್ಲಿ ಗ್ರಾಮಸ್ಥರು ದೂರು ನೀಡಿ, ಇಬ್ಬರು ಆರೋಪಿಗಳಾದ ಕುಟ್ಟೆಟಿರ ಗಯಾ ಜರಿ(ಚಿತ್ರಾ) ಹಾಗೂ ಇಬ್ರಾಹಿಂ ಎಂಬವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಉತ್ತಪ್ಪ ಅವರು ಆತ್ಮಹತ್ಯೆಗೆ ಶರಣಾಗಿ ಇಪ್ಪತ್ತನಾಲ್ಕು ಗಂಟೆಗಳೇ ಕಳೆದಿದ್ದರೂ ಆರೋಪಿಗಳನ್ನು ಇನ್ನೂ ಕೂಡ ಬಂಧಿಸಿಲ್ಲ. ನೇಣಿಗೆ ಶರಣಾಗುವ ಮೊದಲು ಉತ್ತಪ್ಪ ಅವರು ತಮ್ಮ ಪುತ್ರನ ಮೂಲಕ ಮರಣಪತ್ರ ಬರೆಸಿಟ್ಟಿದ್ದು, ಇದರಲ್ಲಿ ದಾರಿ ವಿವಾದಕ್ಕೆ ಸಂಬಂಧಿಸಿದಂತೆ ಮನಸ್ಸಿಗೆ ನೋವನ್ನು ಉಂಟು ಮಾಡಿದವರೇ ಸಾವಿಗೆ ಕಾರಣವೆಂದು ಹೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಕುಟ್ಟೆಟಿರ ಗಯಾ ಜರಿ ಮತ್ತು ಇಬ್ರಾಹಿಂ ಅವರ ಹೆಸರಿದೆ. ಉತ್ತಪ್ಪ ಅವರ ಮನೆಗೆ ಹೋಗುವ ದಾರಿಯಲ್ಲಿ ಬಾಳೆ ಗಿಡಗಳನ್ನು ನೆಟ್ಟು ಸಂಚಾರಕ್ಕೆ ಅಡ್ಡಿಪಡಿಸಿ ಇವರಿಬ್ಬರು ಬೆದರಿಕೆ ಒಡ್ಡಿದ್ದಾರೆ. ಸಾಧು ಸ್ವಭಾವದವರಾದ ಉತ್ತಪ್ಪ ಅವರು ಈ ಬೆಳವಣಿಗೆಯಿಂದ ಮನನೊಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೃತ ಉತ್ತಪ್ಪ ಅವರ ಹೇಳಿಕೆ ಯಂತೆ ಸಾವಿಗೆ ಕಾರಣರಾಗಿರುವ ಈ ಇಬ್ಬರನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಉತ್ತಪ್ಪ ಅವರ ಕುಟುಂಬ ಇದೀಗ ಅನಾಥವಾಗಿದ್ದು, ಪತ್ನಿ ಹಾಗೂ ಮಕ್ಕಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡ ಬೇಕೆಂದು ಆಗ್ರಹಿಸಿದ್ದಾರೆ

ಮುಂದಿನ 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮೃತ ವ್ಯಕ್ತಿಯ ಪತ್ನಿ, ಮಕ್ಕಳು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿರುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.