ಕೂಡಿಗೆ, ಅ. 25: ಕಾರ್ಪೊರೇಷನ್ ಬ್ಯಾಂಕ್ ಸ್ವ-ಉದ್ಯೊಗ ತರಬೇತಿ ಸಂಸ್ಥೆ-ಕೂಡಿಗೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ-ಮಡಿಕೇರಿ ಇವರ ಸಹಯೋಗ ದೊಂದಿಗೆ ಕೊಡಗು ಜಿಲ್ಲೆಯ 18 ರಿಂದ 45 ವರ್ಷದೊಳಗಿನ ವಿದ್ಯಾವಂತ ನಿರುದ್ಯೋಗ ಯುವಕ ಯುವತಿಯರಿಗೆ ಹಾಗೂ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಕೂಡಿಗೆ ಕಾಬ್ಸೆಟ್ ಸಂಸ್ಥೆಯಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ವಿವಿಧ ಉಚಿತ ಸ್ವ-ಉದ್ಯೋಗ ತರಬೇತಿ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ವ-ಉದ್ಯೋಗ ಆಕಾಂಕ್ಷಿಗಳು ಸೇರಿದಂತೆ ಎಲ್ಲಾ ವರ್ಗದ ಶಿಬಿರಾರ್ಥಿಗಳಿಗೂ ಈ ಉಚಿತ ತರಬೇತಿ ಪಡೆಯಲು ಅವಕಾಶವಿರುತ್ತದೆ. ತರಬೇತಿಯನ್ನು ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವದು. ತರಬೇತಿಯ ಅವಧಿಯಲ್ಲಿ ಸರ್ಕಾರಿ ಯೋಜನೆಗಳು ಅವುಗಳ ಪ್ರಯೋಜನ ಪಡೆದುಕೊಳ್ಳುವ ವಿಧಾನ ಹೀಗೆ ಹಲವು ವೃತ್ತಿ ಸಂಬಂಧಿತ ಮಾಹಿತಿಗಳನ್ನು ನೀಡಲಾಗುತ್ತದೆ.

ಮೊದಲ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

ತರಬೇತಿ ಕಾರ್ಯಕ್ರಮಗಳು

ಕಂಪ್ಯೂಟರ್ ಬೇಸಿಕ್ ಮತ್ತು ಡಿ. ಟಿ. ಪಿ. (45ದಿನಗಳು), ಎಲೆಕ್ಟ್ರಾನಿಕ್ ಗೃಹೋಪಯೋಗಿ ವಸ್ತುಗಳ ನಿರ್ವಹಣೆ ಹಾಗೂ ರಿಪೇರಿ (30 ದಿನಗಳು), ಬ್ಯೂಟಿ ಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿ (30ದಿನಗಳು), ಫ್ಯಾಶನ್ ಡಿಸೈನಿಂಗ್ -ಮಹಿಳೆಯರಿಗೆ (30 ದಿನಗಳು), ರೆಫ್ರಿಜರೇಟರ್ ಮತ್ತು ಎ.ಸಿ ರಿಪೇರಿ ಮತ್ತು ನಿರ್ವಹಣೆ (30 ದಿನಗಳು), ಟಿ.ವಿ , ಡಿ.ವಿ.ಡಿ ರಿಪೇರಿ ಮತ್ತು ನಿರ್ವಹಣೆ (30 ದಿನಗಳು), ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್, ಟ್ಯಾಲಿ (45 ದಿನಗಳು), ಲಘುವಾಹನಾ ಚಾಲನಾ ತರಬೇತಿ (30 ದಿನಗಳು).

ಕನ್ನಡ ಬಲ್ಲ ಯುವಕ ಯುವತಿಯರು ಅರ್ಜಿಯನ್ನು ಕಾಬ್ಸೇಟ್ ಸಂಸ್ಥೆಯಿಂದ ಪಡೆದು ನಿರ್ದೇಶಕರು ಕಾಬ್ಸೆಟ್ ಸಂಸ್ಥೆ-ಕೂಡಿಗೆ, ಕೊಡಗು ಇವರಿಗೆ ಸಲ್ಲಿಸಬೇಕಾಗಿರುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ನೀಡಲಾಗುವದು ಹಾಗೂ ಎಲ್ಲಾ ತರಬೆÉೀತಿಗಳಿಗೆ ಊಟ ಮತ್ತು ವಸತಿ ಉಚಿತ ಆಗಿರುತ್ತದೆ. ಆಸಕ್ತ ಅಭ್ಯರ್ಥಿಗಳಿಗೆ ಬ್ಯಾಂಕಿನ ಮೂಲಕ ಹಣಕಾಸು ನೆರವು ಪಡೆಯಲು ಮಾರ್ಗದರ್ಶನ ಮಾಡಲಾಗುವದು. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.

ಕಚೇರಿ: 08276-278729,278730, ನಾಗೇಂದ್ರ- ನಿರ್ದೇಶಕರು-9901223560, ಅನಿಲ್ ಕುಮಾರ್-ಉಪನ್ಯಾಸಕರು-9481112729, ಸಲಾವುದ್ದಿನ್-ಕಛೇರಿ ಸಹಾಯಕರು: 9449402081.