ಮಡಿಕೇರಿ, ಜೂ. 19: ಮೈಸೂರಿನ ಕಾವೇರಿ ಹೃದಯ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದಲ್ಲಿ ತಾ. 25 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ವಿಶೇಷವಾಗಿ ಬಿ.ಪಿ.ಎಲ್. ಕಾರ್ಡುದಾರರಿಗೆ ವಾಜಪೇಯಿ ಆರೋಗ್ಯ ಶ್ರೀ ಮೂಲಕ ಹೃದಯ ತೊಂದರೆ, ಎದೆ ಉರಿಯುವಿಕೆ, ಉಸಿರಾಟ ತೊಂದರೆ, ಮೂರ್ಛೆ ಹೋಗುವದು, ಕ್ಯಾನ್ಸರ್, ಮೂತ್ರದಲ್ಲಿ ಕಲ್ಲು, ಸುಟ್ಟಗಾಯ ಮಕ್ಕಳ ಶಸ್ತ್ರ ಚಿಕಿತ್ಸೆ ಮತ್ತಿತರ ಕಾಯಿಲೆಗಳ ಸಂಬಂಧ ತಜ್ಞ ವೈದ್ಯರಿಂದ ತಪಾಸಣೆ ಮಾಡಲಾಗುವದು. ತಪಾಸಣೆ ಮಾಡಿಕೊಳ್ಳುವಲ್ಲಿ ಫೋಟೋ ಇರುವ ಬಿ.ಪಿ.ಎಲ್. ಕಾರ್ಡ್, ಅಂತ್ಯೋದಯ ಕಾರ್ಡ್ ಹಾಗೂ ತಾತ್ಕಾಲಿಕ ಪಡಿತರ ಚೀಟಿ ತರಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ: 7829128776, 8771669354 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.