ಮಡಿಕೇರಿ, ಅ. 8: ತಾವು ಬರೆದಿರುವ ‘ಇಬ್ಬನಿ’ ಕಾದಂಬರಿಯನ್ನು ವಿಮರ್ಶಕರಾದ ಡಾ|ಮಳಲಿ ವಸಂತ ಕುಮಾರ್ ಅವರು ವಿಮರ್ಶಿಸುವ ಮೂಲಕ ಕಾದಂಬರಿ ರಚನೆಯ ಕುರಿತು ಶ್ಲಾಘನೆಯ ಮಾತುಗಳನ್ನಾಡಿದ್ದಾರೆ ಎಂದು ‘ಇಬ್ಬನಿ’ ಕಾದಂಬರಿ ರಚನೆಕಾರ, ಪೆÇನ್ನಂಪೇಟೆಯ ಆಟೋ ಚಾಲಕ ಟಿ.ಆರ್. ವಿನೋದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ತಾನು ಮಾಮೂಲಿನಂತೆ ಮೊದಲ ಕಾದಂಬರಿಯಾಗಿ ಇಬ್ಬನಿಯನ್ನು ರಚಿಸಿದ್ದೇನೆ ಎಂದರು.

ವಿಮರ್ಶಕರು ಅಭಿಪ್ರಾಯಪಟ್ಟಿರುವಂತೆ ಈ ಗುಣಮಟ್ಟದಲ್ಲಿ ಕಾದಂಬರಿ ಇರುತ್ತದೆ ಎನ್ನುವ ಮನೋಭಾವನೆ ತನ್ನಲ್ಲಿ ಇರಲಿಲ್ಲ. ಆದರೆ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಜಿಲ್ಲೆಗೆ ಆಗಮಿಸಿದ್ದ ಡಾ. ಮಳಲಿ ವಸಂತ ಕುಮಾರ್ ಅವರಿಗೆ ಪುಸ್ತಕವನ್ನು ನೀಡಿ, ಇದರ ಬಗ್ಗೆ ಅಭಿಪ್ರಾಯ ತಿಳಿಸುವಂತೆÉ ಮನವಿ ಮಾಡಿಕೊಂಡಿದ್ದೆ. ಈ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಓದಿ ವಿಮರ್ಶೆಯನ್ನು ಕಳುಹಿಸಿಕೊಟ್ಟಿರುವ ಡಾ. ಮಳಲಿ ವಸಂತ ಕುಮಾರ್ ಅವರು, ಇಬ್ಬನಿಯನ್ನು ಪ್ರಶಂಸಿಸಿದ್ದಾರೆ. ಇದು ತಮ್ಮ ಸಾಹಿತ್ಯಾಭಿರುಚಿಗೆ ಹೆಚ್ಚಿನ ಪೆÇ್ರೀತ್ಸಾಹವನ್ನು ನೀಡಿದಂತಾಗಿದ್ದು, ಮತ್ತೊಂದು ಕಾದಂಬರಿ ರಚನೆಗೆ ಮುಂದಾಗಿರುವದಾಗಿ ವಿನೋದ್ ತಿಳಿಸಿದರು.

ಮಾರಕ ಕಾಯಿಲೆಯಿಂದ ಸಾಯುವ ಹಂತದಲ್ಲಿರುವ ನಾಯಕ ನಾಯಕಿಯರು ಕೊನೆಯ ಗಳಿಗೆಯಲ್ಲಿ ಒಂದಾಗಿ, ಪ್ರಾಣ ಕಳೆದುಕೊಳ್ಳುವ ಕಥಾ ಹಂದರ ಹೊಂದಿರುವ ಈ ಕಾದಂಬರಿಯಲ್ಲಿ ಭಾರತೀಯ ಸಂಸ್ಕøತಿಗೆ ಆದ್ಯತೆ ನೀಡಲಾಗಿದೆಯೆಂದರು. ಈಗಾಗಲೇ ಕಾದಂಬರಿಯ 800 ಪ್ರತಿಗಳು ಮಾರಾಟವಾಗಿದ್ದು, ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆಯೆಂದು ವಿನೋದ್ ಅಭಿಪ್ರಾಯಪಟ್ಟರು.