ಮಡಿಕೇರಿ, ಸೆ. 23: ಕಡಗದಾಳು-ಇಬ್ನಿವಳವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನಲ್ಲಿ ರೂ. 6 ಕೋಟಿ ವ್ಯವಹಾರ ನಡೆಸಿದ್ದು, ರೂ. 4.93 ಲಕ್ಷ ಲಾಭ ಗಳಿಸಿದೆÀಯೆಂದು ಸಂಘದ ಅಧ್ಯಕ್ಷ ಕೆಚ್ಚೇಟಿರ ಬಿ. ಬಿದ್ದಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಆರ್ಥಿಕ ಸಾಧನೆಯ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ಸಂಘ 600 ಸದಸ್ಯರನ್ನು ಹೊಂದಿ ರೂ. 30 ಲಕ್ಷಕ್ಕೂ ಹೆಚ್ಚಿನ ಷೇರು ಬಂಡವಾಳ ಹೊಂದಿದೆ ಎಂದರು. ಕೃಷಿಕರ ಅನುಕೂಲಕ್ಕಾಗಿ ಮರಣನಿಧಿ, ಯಶಸ್ವಿನಿ ಯೋಜನೆಗಳ ಸೌಲಭ್ಯವನ್ನು ಒದಗಿಸುತ್ತಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಸಂಘದ ಸದಸ್ಯರಿಗೆ ರೂ. ಶೇ. 3.50 ಕೋಟಿ ವಿವಿಧ ಸಾಲಗಳನ್ನು ವಿತರಿಸ ಲಾಗಿದ್ದು, ಸಾಲ ವಸೂಲಾತಿ ಶೇ. 99 ರಷ್ಟು ಇದೆ. ಬ್ಯಾಂಕಿನ ಆರ್ಥಿಕ ವ್ಯವಹಾರಗಳನ್ನು ಗಮನಿಸಿ ಕೆಡಿಸಿಸಿ ಬ್ಯಾಂಕ್‍ನಿಂದ ಕಳೆದ ಹಲವು ವರ್ಷಗಳಿಂದ ಸಂಘ ಪ್ರಥಮ ಬಹುಮಾನವನ್ನು ಪಡೆದುಕೊಂಡು ಬರುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಇಬ್ನಿವಳವಾಡಿ ಗ್ರಾಮದ ಜನರಿಗೆ ಅನುಕೂಲವಾಗುವಂತೆ ಬೋಯಿಕೇರಿ ಯಲ್ಲಿ 2015ನೇ ಸಾಲಿನಲ್ಲಿ ಸಂಘದ ಶಾಖೆಯೊಂದನ್ನು ಆರಂಭಿಸಿದ್ದು, ಇಲ್ಲಿಯವರೆಗೆ ಸುಮಾರು ರೂ. 50 ಲಕ್ಷಗಳ ವ್ಯವಹಾರವನ್ನು ನಡೆಸಿರುವದಾಗಿ ಮಾಹಿತಿ ನೀಡಿದರು.

ಸಂಘÀದ ವಾರ್ಷಿಕ ಮಹಾಸಭೆ ತಾ. 25 ರಂದು ಕಡಗದಾಳು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಸಂಘÀದ ಸರ್ವ ಸದಸ್ಯರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸಂಘಕ್ಕೆ ಸ್ವಂತ ಕಟ್ಟಡ ಮತ್ತು ಗೋದಾಮು ನಿರ್ಮಿಸುವ ಉದ್ದೇಶದಿಂದ ಕಡಗದಾಳುವಿನಲ್ಲಿ 25 ಸೆಂಟ್ಸ್ ಜಾಗವನ್ನು ಸರಕಾರದಿಂದ ಮಂಜೂರು ಮಾಡಿಸಿ ಕೊಂಡು, ಅದಕ್ಕೆ ಸಂಬಂಧಿಸಿದ ಹಣವನ್ನು ಪಾವತಿಸಿದೆ. ವಾರ್ಷಿಕ ಮಹಾಸಭೆಯ ಬಳಿಕ ಆ ಜಾಗದಲ್ಲಿ ಅಂದಾಜು ರೂ. 50 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಡಿವಿಡೆಂಡ್‍ನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲು ತಮ್ಮ ಒಪ್ಪಿಗೆಯನ್ನು ಸೂಚಿಸಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೊರವಂಡ ಕೆ. ಬೋಪಯ್ಯ, ನಿರ್ದೇಶಕ ಪೆÀÇನ್ನಚೆಟ್ಟೀರ ಅಪ್ಪಚ್ಚ, ಪೆÇನ್ನಚೆಟ್ಟೀರ ರಮೇಶ್, ಎಂ.ಎಸ್. ಶಂಭಯ್ಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಲೋಕೇಶ್ ಉಪಸ್ಥಿತರಿದ್ದರು.