ಮಡಿಕೆರಿ ಜ 20. ಕೊಡಗು ಪ್ರೆಸ್ ಕ್ಲಬ್ ವತಿಯಿಂದ 18ನೇ ಪ್ರೆಸ್ ಕ್ಲಬ್ ಡೇ ತಾ. 21 ರಂದು (ಇಂದು) ನಡೆಯುತಿದ್ದು, ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ. ಎ. ಹರೀಶ್ ಉಧ್ಘಾಟಿಸಲಿದ್ದಾರೆ. ಪತ್ರಕರ್ತರಿಗೆ ಟೇಬಲ್ ಟನ್ನಿಸ್, ಕೇರಂ, ಚೆಸ್ ಮತ್ತು ರೆಮ್ಮಿ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ 6 ಗಂಟೆಯಿಂದ ಮಡಿಕೇರಿಯ ರೋಟರಿ ಹಾಲ್ ನಲ್ಲಿ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಎಂ. ಪಿ. ಕೇಶವ ಕಾಮತ್ ವಹಿಸಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉಧ್ಘಾಟಿಸಲಿದ್ದಾರೆ. ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಸಾಧಕರನ್ನು ಸನ್ಮಾನಿಸಲಿದ್ದಾರೆ.
ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ. ಪಿ. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರೆಸ್ ಕ್ಲಬ್ ಸ್ಥಾಪಕ ಟಿ.ಪಿ. ರಮೇಶ್ ಅವರನ್ನು ಮತ್ತು “ಕೊಡಗು ಪ್ರೆಸ್ ಕ್ಲಬ್ ಪುರಸ್ಕಾರ -2016“ ಪ್ರಶಸ್ತಿ ವಿಜೇತ
(ಮೊದಲ ಪುಟದಿಂದ) ಪತ್ರಕರ್ತ ಎಂ.ಎನ್ ಚಂದ್ರಮೋಹನ್ ಅವರನ್ನು ಸನ್ಮಾನಿಸಲಾಗುವದು. ಜಿಲ್ಲೆಯಲ್ಲಿ ಪತ್ರಿಕೆಗಳಿಗೆ ಪರೋಕ್ಷವಾಗಿ ಸಹಕರಿಸಿದ ಸುಂಟಿಕೊಪ್ಪದ ಪತ್ರಿಕಾ ಏಜೆಂಟ್ ಎಂ. ಶಾಂತಪ್ಪ, ಸಿದ್ದಾಪುರ ಪತ್ರಿಕಾ ಏಜೆಂಟ್ ಕೆ.ವಿ. ವಿನೋದ್ ಮತ್ತು ಶಕ್ತಿ ಪತ್ರಿಕೆಯ ಸಿಬ್ಬಂದಿ ಹಲೀಮಾ ಅವರನ್ನು ಸನ್ಮಾನಿಸಲಾಗುವದು.
ಅಲ್ಲದೆ ಕೊಡಗು ಪ್ರೆಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಜಗದೀಶ್ ಬೆಳ್ಯಪ್ಪ, ಕೊಡಗು ಜಾನಪದ ಪರಿಷತ್ತು ಅಧ್ಯಕ್ಷರಾದ ಅನಂತಶಯನ, “ಮದರ್ ತೆರೆಸ” ಪ್ರಶಸ್ತಿ ವಿಜೇತೆ ಜಯಶ್ರೀ ಅನಂತಶಯನ, ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೆಜಿಂಗ್ ಟ್ರಸ್ಟಿಯಾಗಿ ಪುನರಾಯ್ಕೆಯಾದ ಬಿ.ಎನ್.ಮನು ಶೆಣೈ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲೋಕೇಶ್ ಸಾಗರ್, ಕೊಡಗು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಮಹೇಶ್, ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಕುಚುಪುಡಿ ನೃತ್ಯ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು