ಮಡಿಕೇರಿ, ಆ. 20: ನಂಜರಾಯಪಟ್ಟಣ ಗೌಡ ಯೂತ್ ಕ್ಲಬ್ ಮತ್ತು ಕೊಡಗು ಗೌಡ ಯುವ ವೇದಿಕೆ ಸಹಯೋಗದೊಂದಿಗೆ ದ್ವಿತೀಯ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ತಾ. 21ರಂದು (ಇಂದು) ನಂಜರಾಯಪಟ್ಟಣದ ಕೋಟುಮಾಡ ಐನ್ಮನೆ ಗದ್ದೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಗೌಡ ಯೂತ್ ಕ್ಲಬ್ ಅಧ್ಯಕ್ಷ ನಡುಮನೆ ಪವನ್ ಅಧ್ಯಕ್ಷತೆ ವಹಿಸುವರು. ಗೌಡ ಸಮಾಜ ಗೌರವ ಅಧ್ಯಕ್ಷ ಮೂಟೇರ ನಂಜುಂಡ ಉಪಸ್ಥಿತರಿರುವರು.
ಕ್ರೀಡಾಕೂಟವನ್ನು ಶಾಸಕ ಕೊಂಬಾರನ ಜಿ. ಬೋಪಯ್ಯ ಉದ್ಘಾಟಿಸುವರು. ಅತಿಥಿಗಳಾಗಿ ಶಾಸಕ ಮಂಡೇಪಂಡ ಅಪ್ಪಚ್ಚು ರಂಜನ್, ಜಿ.ಪಂ. ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಗೌಡ ಸಮಾಜ ಅಧ್ಯಕ್ಷ ಕೆದಂಬಾಡಿ ಚೇತನ್, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಕೇಚಪ್ಪನ ಮೋಹನ್, ಇನ್ನಿತರರು ಪಾಲ್ಗೊಳ್ಳುವರು. ಸಂಜೆ ನಡೆಯುವ ಸಮಾರೋಪ ಸಮಾರಂಭವನ್ನು ಪೈಕೇರ ಮನೋಹರ್ ಮಾದಪ್ಪ ಉದ್ಘಾಟಿಸುವರು. ನಡುಮನೆ ಪವನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪುರುಷ ಹಾಗೂ ಮಹಿಳೆಯರಿಗಾಗಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕೆಸರು ಗದ್ದೆ ಓಟ, ಮೂರು ಕಾಲಿನ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ.