ಮಡಿಕೇರಿ, ಆ. 16: ಓಮನ್ನ ಮಸ್ಕಟ್ನಲ್ಲಿ ಭಾರತ ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಪೆಂಡೆನ್ಸ್ ಕಪ್ ಹಾಕಿ ಫೆಸ್ಟಿವಲ್ನಲ್ಲಿ ಯುಎಇ ರಾಷ್ಟ್ರದಲ್ಲಿರುವ ಕೊಡವ ಕೂಟದ ಸದಸ್ಯರನ್ನೊಳಗೊಂಡ ಟೀಂ ಕೂರ್ಗ್ ತಂಡ ಪಾಲ್ಗೊಂಡಿತ್ತು.
ಮಸ್ಕಟ್ನ ಎಂಬೆಸಿ ಆಫ್ ಇಂಡಿಯಾ, ಓಮನ್ ಹಾಕಿ ಅಸೋಸಿಯೇಷನ್ ವತಿಯಿಂದ ಈ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. 10ನೇ ವರ್ಷದ ಪಂದ್ಯಾಟ ಇದಾಗಿದ್ದು, ಕೊಡವ ಕೂಟದ ಟೀಂ ಕೂರ್ಗ್ ಇದೇ ಪ್ರಥಮ ಬಾರಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಸೆಮಿಫೈನಲ್ನಲ್ಲಿ ಪರಾಜಿತಗೊಂಡಿತು. ಪಂದ್ಯಾವಳಿಯ ಬಳಿಕ ಯುಎಇ ಮತ್ತು ಓಮನ್ನಲ್ಲಿರುವ ಜನಾಂಗ ಬಾಂಧವರು ಒಂದಾಗಿ ಕಲೆತು ಸಂತೋಷ ಕೂಟ ಹಮ್ಮಿಕೊಂಡಿದ್ದರು. ಕೊಡಗಿನ ಮದ್ದ್ ಪಾಯಸವನ್ನು ಇಲ್ಲಿ ಸಿದ್ಧಪಡಿಸಲಾಗಿದ್ದು, ಕಕ್ಕಡದ ಸಂಭ್ರಮವೂ ಇಲ್ಲಿ ಆಚರಿಸಲ್ಪಟ್ಟಿದ್ದು ವಿಶೇಷವಾಗಿತ್ತು. -ಶಶಿ