ಸೋಮವಾರಪೇಟೆ, ಜು. 6: ಸಮೀಪದ ಬೆಟ್ಟದಳ್ಳಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಾಗಿ 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ದಾಕ್ಷಾಯಿಣಿ ಅವರನ್ನು ಈ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸನ್ಮಾನಿಸಿ ಬೀಳ್ಕೊಟ್ಟರು. ಬೆಟ್ಟದಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಟ್ಟದಳ್ಳಿ,ಹರಗ, ಜಕ್ಕನಳ್ಳಿ, ಕುಂದಳ್ಳಿ ಅಂಗನವಾಡಿ ಕಾರ್ಯಕರ್ತೆಯರಾದ ಕಮಲ, ಪೂರ್ಣಿಮಾ, ರುಕ್ಮಿಣಿ, ಸವಿತ, ಸಹಾಯಕಿಯರಾದ ದೇವೀರಮ್ಮ, ಪಾರ್ವತಿ, ಮಲ್ಲಮ್ಮ, ಆಶಾ ಕಾರ್ಯಕರ್ತೆಯರಾದ ದಿವ್ಯ, ಚೈತ್ರ ಅವರುಗಳು ನಿವೃತ್ತ ಆರೋಗ್ಯ ಸಹಾಯಕಿಯನ್ನು ಸನ್ಮಾನಿಸಿ ಬೀಳ್ಕೊಟ್ಟರು.