ಸೋಮವಾರಪೇಟೆ, ಡಿ. 29: ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಆರೋಗ್ಯ ಭಾಗ್ಯ ಜಾಗೃತಿ ಬೀದಿ ನಾಟಕ ನಡೆಯಿತು.ಜಾಗೃತಿ ಕಾರ್ಯಕ್ರಮಕ್ಕೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಚಾಲನೆ ನೀಡಿದರು. ಕಾವೇರಿ ಕೃಪಾ ಪೋಷಿತ ಕಲಾ ಮಂಡಳಿಯ ಶಾರದಾ, ಗೌರಮ್ಮ, ಯಶೋಧ, ಶಿವಕುಮಾರ್, ಚಂದ್ರಪ್ಪ, ಸ್ವಾಮಿ, ಮಂಟೇಸ್ವಾಮಿ ಮತ್ತು ಈ. ರಾಜುರವರಿಂದ ಬೀದಿ ನಾಟಕ ನಡೆಯಿತು.