ಮಡಿಕೇರಿ, ಡಿ. 27 : ಮಡಿಕೇರಿ ನಗರಸಭೆಯ 2017-18ನೇ ಸಾಲಿನ ಆಯವ್ಯಯವನ್ನು ಸಿದ್ಧಪಡಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆಯಲು ಮಡಿಕೇರಿ ನಗರಸಭೆಯ 2017-18ನೇ ಸಾಲಿನ ಆಯವ್ಯಯ ಸಿದ್ಧಪಡಿಸಲು ಸಾರ್ವಜನಿಕರ ಸಲಹೆ ಸೂಚನೆ ಪಡೆಯುವ ಸಭೆಯು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ತಾ. 29 ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ

ಈ ಸಭೆಗೆ ನೊಂದಾಯಿತ ನಿವಾಸಿಗರ ಕಲ್ಯಾಣ ಸಂಸ್ಥೆಗಳು, ನೊಂದಾಯಿತ ಸರ್ಕಾರೇತರ ಸಂಸ್ಥೆಗಳು, ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳು ಅಸೋಸಿಯೇಷನ್‍ಗಳು, ಇತರೇ ಸಂಘ - ಸಂಸ್ಥೆಗಳು ಹಾಗೂ ಪೌರ ಮುಖಂಡರುಗಳು ಮತ್ತು ನಗರಸಭಾ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳು ಸಲಹೆ ಸೂಚನೆಗಳನ್ನು ಕೊಡಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಬಿ.ಶುಭ ಅವರು ಕೋರಿದ್ದಾರೆ.