ನಾಪೆÇೀಕ್ಲು, ಡಿ. 31: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘ ಮತ್ತು ಯೂತ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ವೆಸ್ಟ್ ಕೊಳಕೇರಿ ಶ್ರೀ ಭಗವತಿ ದೇವಳದ ಬಳಿ ನಡೆದ ಆಟ್, ಪಾಟ್, ಪಡಿಪು ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ವೆಸ್ಟ್ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ಕೇಟೋಳಿರ ರಾಜಪ್ಪ ಕುಟ್ಟಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಕೊಡವ ಭಾಷೆ, ಸಂಸ್ಕøತಿಯ ಬೆಳವಣಿಗೆಯಾU Àಬೇಕಾದರೆ ಭಾಷೆಯ ಮೂಲವನ್ನು ಮರೆಯಬಾರದು. ಮೂಲ ಭಾಷೆಯಲ್ಲಿ ವ್ಯತ್ಯಾಸ ಉಂಟಾದರೆ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ಆದಿ ಭಾಷೆಯ ಬಗ್ಗೆ ಎಲ್ಲರೂ ಅಭಿಮಾನವಿಟ್ಟು ಕಲಿಯಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಲು ಸಾಧ್ಯವಾಗುತ್ತದೆ ಎಂದರು.

ಗ್ರಾಮದ ಹಿರಿಯರು ಮತ್ತು ಮುಖ್ಯ ಅತಿಥಿ ಕಲಿಯಂಡ ಡಾಲು ಕಾಳಪ್ಪ ಮಾತನಾಡಿ, ಸಂಸ್ಕøತಿಯ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯೆಗೆ ಹೆಚ್ಚಿನ ಆದ್ಯತೆ ನೀಡಿದರೆ ಸಂಸ್ಕøತಿ, ಭಾಷೆಯ ಬಗ್ಗೆ ಸಂಪೂರ್ಣ ಅಧ್ಯಯನ, ಚಿಂತನೆ ನಡೆಸಲು ಸಾಧ್ಯ. ಜನಾಂಗ ಸಮೃದ್ಧಿಯಾಗಿ ಬೆಳೆಯಬೇಕಾದರೆ ಸಂಸ್ಕøತಿಯ ಬೆಳವಣಿಗೆಯಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮಾತನಾಡಿ, ಜಾನಪದ ಕಲೆಯ ಬಗ್ಗೆ ನಿರಾಸಕ್ತಿ ಹೆಚ್ಚಾಗುತ್ತಿರುವ ಕಾಲ ಘಟ್ಟದಲ್ಲಿ ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ಉತ್ತಮ ಉಮ್ಮತ್ತಾಟ್ ತಂಡ ರಚನೆಯಾಗಿರುವದು ಸಂತಸ ತಂದಿದೆ. ಕೊಡವರ ಆದಿ, ಮೂಲ ಬಾಳೋಪಾಟ್‍ನಲ್ಲಿ ಅಡಗಿದೆ. ಹಬ್ಬ ಹರಿದಿನಗಳಲ್ಲಿ ಸಂಸ್ಕøತಿಯನ್ನು ಬಿಂಬಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೇಶ್ ಪೂವಯ್ಯ, ಬೊಟ್ಟೋಳಂಡ ಅಪ್ಪಣ್ಣ ಮಾತನಾಡಿದರು.

ಈ ಸಂದರ್ಭ ಬೊಳಕಾಟ್, ಉಮ್ಮತ್ತಾಟ್, ಕೋಲಾಟ್ ಪ್ರದರ್ಶನ ನಡೆಯಿತು. ಕೇಟೋಳಿರ ಡೆನ್, ದೇಚಮ್ಮ, ಕಾಂಡಂಡ ರೇಖಾ ಪೆÇನ್ನಣ್ಣ, ಕನ್ನಂಬಿರ ತಾಯಕ್ಕಿ ಚಂಗಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಕೊಡವ ಹಾಡುಗಳ ಮೂಲಕ ಎಲ್ಲರನ್ನು ರಂಜಿಸಿದರು. ಕುಂಡ್ಯೋಳಂಡ ಮುತ್ತಪ್ಪ, ಕಾಡಂಡ ಸುರೇಶ್, ಗಣಪತಿ, ಬೊಟ್ಟೋಳಂಡ ಪೆÇನ್ನಯ್ಯ ಬಾಳೋಪಾಟ್ ಪ್ರದರ್ಶಿಸಿದರು.

ವೇದಿಕೆಯಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಬೊಟ್ಟೋಳಂಡ ಚಿತ್ರಾ ಪೆÇನ್ನಯ್ಯ, ಯೂತ್ ಕ್ಲಬ್ ಅಧ್ಯಕ್ಷ ಕೇಟೋಳಿರ ಡಾಲಿ ಅಪ್ಪಚ್ಚ, ಹಿರಿಯರಾದ ಕುಂಡ್ಯೋಳಂಡ ಮೇದಪ್ಪ, ಅಪ್ಪಚ್ಚಿರ ಮೀನ, ಕನ್ನಂಬಿರ ಚಂಗಪ್ಪ, ಕಾಂಡಂಡ ಕಿಟ್ಟು ಮೊಣ್ಣಪ್ಪ, ಕುಂಬಾರರ ಪೆÇನ್ನಪ್ಪ ಉಪಸ್ಥಿತರಿದ್ದರು.

ಕುಂಡ್ಯೋಳಂಡ ಕಾವೇರಿ ಮತ್ತು ತಂಡದಿಂದ ಪ್ರಾರ್ಥನೆ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ ನಿರೂಪಿಸಿ, ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಕುಂಡ್ಯೋಳಂಡ ವಿಶು ಪೂವಯ್ಯ ಸ್ವಾಗತಿಸಿ ವಂದಿಸಿದರು.